*ನಿಪ್ಪಾಣಿ ಜನತೆಗಾಗಿ 24 X 7 ನೀರು ಸರಬರಾಜು: ವೇಧಗಂಗಾ ನದಿಯಿಂದ ಜವಾಹರ್ ಕೆರೆಯವರೆಗೆ ಪೈಪಲೈನ್ ಶೀಘ್ರ ಪ್ರಾರಂಭ*
ಕಾಮಗಾರಿ ಶೀಘ್ರದಲ್ಲಿ ಪುರ್ಣಗೊಳಿಸಲು ಶಾಸಕಿ ಶಶಿಕಲಾ ಜೊಲ್ಲೆ ಸೂಚನೆ
ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ನಗರಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮುಂಬರುವ 20 ವರ್ಷಗಳವರೆಗೂ ಯಾವುದೇ ರೀತಿಯ ನೀರಿನ ಕೊರತೆ ಭಾಸವಾಗದಂತೆ ನೋಡಿಕೊಳ್ಳುವುದು ಮತ್ತು ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಮಟ್ಟವನ್ನು ಹೆಚ್ಚಿಸುವ ಕುರಿತು ಜೈನ್ ಇರಿಗೇಶನ ಮತ್ತು ಹಾಗೂ ಕೆಯುಡಬ್ಲೂಎಸ್ ಆಂಡ್ ಡಿಬಿ ಬೋರ್ಡ್ ಅಧಿಕಾರಿಗಳು, ಪಾಲಿಕೆ ಆಯುಕ್ತ, ಪಾಲಿಕೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರೊಂದಿಗೆ ಯಮಗರ್ಣಿ ನದಿ ತೀರದ ಜಾಕವೆಲ್ ಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಭೇಟಿ ನೀಡಿ, ಮಾಹಿತಿ ಪಡೆದು ವೀಕ್ಷನೆ ನಡೆಸಿ, ಕೆಲವು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ 32.83 ಕೋಟಿ ರೂ.ಮೊತ್ತದ್ದಲ್ಲಿ 2040 ವರೆಗೆ ಜವಾಹರ್ ಕೆರೆಗೆ ಇನ್ನು ಅಧಿಕ ಪ್ರಮಾಣದಲ್ಲಿ ನೀರಿನ ಶೇಖರಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ವೇಧಗಂಗಾ ನದಿಯಿಂದ ಪೈಪ್ ಲೈನ್ ಅಳವಡಿಸಿ ಜವಾಹರ್ ಕೆರೆಗೆ ನೀರು ತುಂಬಿಸುವ ಕುರಿತು ಯೋಜನಾ ವರದಿಯನ್ನು ಸಿದ್ಧ ಪಡಿಸಲಾಗಿದೆ. ನಗರದಲ್ಲಿ 24*7 ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಲು 15 ಲಕ್ಷ ಲೀಟರ್ ನೀರಿನ 2 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. ಅದೇ ರೀತಿ ಮಳೆಗಾಲದಲ್ಲಿ ಯಮಗರ್ಣಿಯ ಜಾಕವೆಲಗೆ ತೆರಳಲು ಯಾವುದೇ ತೊಂದರೆಯಾಗದಂತೆ ಮುಖ್ಯ ರಸ್ತೆಯಿಂದ ಜಾಕೆವೆಲ್ ವರೆಗೂ ಸೇತುವೆ (ಬ್ರಿಡ್ಜ್) ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೈನ್ ಇರಿಗೇಶನ್ ಪ್ರೊಜೆಕ್ಟ ಮ್ಯಾನೇಜರ್ ಲಕ್ಷ್ಮೀಕಾಂತ ಶೆಳ್ಳಗಿ,ಕೆಯುಡಬ್ಲೂಎಸ್ ಸಹಾಯಕ ಇಂಜಿನಿಯರ್ ರಾಜು ಗಾಯಕವಾಡ, ಪೌರಾಯುಕ್ತರಾದ ದೀಪಕ ಹರದಿ,ನೀರು ಸರಬರಾಜು ಮುಖ್ಯಸ್ಥರು ಪ್ರವೀಣ,ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಸೌ. ಸೋನಲ ಕೊಠಡಿಯಾ, ಉಪಾಧ್ಯಕ್ಷರಾದ ಸಂತೋಷ ಸಾಂಗವಕರ, ನಗರಸಭೆ ಸದಸ್ಯರಾದ ಜಯವಂತ ಭಾಟಲೆ, ಬಾಳಾಸಾಹೇಬ ದೇಸಾಯಿ ಸರಕಾರ,ರಾಜು ಗುಂದೇಶಾ,ವಿಲಾಸ ಗಾಡಿವಡ್ಡರ,ಜಸರಾಜ ಗಿರಿ, ಸದ್ದಾಂ ನಗಾರಜಿ,ಪ್ರಶಾಂತ್ ಕೆಸ್ತಿ,ರವಿ ಕದಂ, ಸುಜಾತಾ ಕದಂ,ರಾಜೇಶ ಕೊಠಡಿಯಾ, ಅಭಿನಂದನ ಮುದಕೂಡೆ ,ಸ್ಥಳೀಯ ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ