Kannada NewsLatest

ಜೈನಧರ್ಮದ ತತ್ವ-ಸಿದ್ಧಾಂತ ಶಾಂತಿ-ಸಾಮರಸ್ಯದ ಜೀವನಕ್ಕೆ ದಾರಿ; ಶ್ರೀನಿವಾಸ ಶ್ರೀಮಂತ ಪಾಟೀಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶೇಡಬಾಳ ಪಟ್ಟಣದಲ್ಲಿ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರದ ವತಿಯಿಂದ ಆಯೋಜಿಸಿದ ಪಂಚಕಲ್ಯಾಣ ಮಹೋತ್ಸವ ಸಮಾರಂಭದಲ್ಲಿ ಕಾಗವಾಡ ಮತಕ್ಷೇತ್ರದ ಯುವ ನಾಯಕ ಶ್ರೀನಿವಾಸ ಶ್ರೀಮಂತ ಪಾಟೀಲ ಅವರು ಭಾಗವಹಿಸಿ, ತೀರ್ಥಂಕರರಿಗೆ ಪೂಜೆ ಸಲ್ಲಿಸಿ, ಮಹಾರಾಜರ ಆಶೀರ್ವಾದ ಪಡೆದರು.

ವಿಶ್ವದಲ್ಲಿ ಜೈನಧರ್ಮವು ಒಂದು ಅಹಿಂಸಾ ಪರಮೋಧರ್ಮವಾಗಿದ್ದು, ಅವುಗಳ ತತ್ವ ಹಾಗೂ ಸಿದ್ಧಾಂತ ಮೇಲೆ ವಿಶ್ವವ್ಯಾಪಿ ಶಾಂತಿಯ ಹಾಗೂ ಸಾಮರಸ್ಯದ ಜೀವನಕ್ಕೆ ದಾರಿಯಾಗಿದೆ ಎಂದು ಯುವ ನಾಯಕರು ಹೇಳಿದರು.

ಈ ಸಮಾರಂಭದಲ್ಲಿ ಪಂಚಕಲ್ಯಾಣ ಮಹೋತ್ಸವದ ಕಮಿಟಿಯವರು ಪ್ರೀತಿಯಿಂದ ಮಾಡಿದ ಸನ್ಮಾನವನ್ನು ಸ್ವೀಕರಿಸಿದ್ದರು.

ಈ ಸಮಯದಲ್ಲಿ ಶೇಡಬಾಳ ಪಟ್ಟಣದ ಸ್ಥಳೀಯ ಮುಖಂಡರು, ಜೈನ ಸಮಾಜದ ಹಲವಾರು ಮುನಿ ಮಹಾರಾಜರು, ಪಂಚಕಲ್ಯಾಣ ಮಹೋತ್ಸವದ ಕಮಿಟಿಯ ಸದಸ್ಯರು ಹಾಗೂ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Home add -Advt

ಹಲೋ ಕಂದಾಯ ಸಚಿವರೇ; ಪ್ರಥಮ ಕರೆಯ ಫಲಾನುಭವಿ ಗೋಕಾಕ್ ನ ಶಿಲ್ಪಾ ರೆಡ್ಡಿಗೆ ಪಿಂಚಣಿ ವಿತರಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button