Latest

ಜಮೀನು ವಿವಾದ; ನಟ ಯಶ್ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ; ಹಾಸನ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಹಾಸನ ಜಿಲ್ಲೆಯ ತಿಮ್ಲಾಪುರ ಗ್ರಾಮಸ್ಥರು ತಿರುಗಿ ಬಿದಿದ್ದು, ನಟನ ವಿರುದ್ಧ ಧಿಕ್ಕಾರ ಕೋಗಿ ಪ್ರತಿಭಟನೆ ನಡೆಸಿದ್ದಾರೆ.

ತಿಮಲಾಪುರ ಗ್ರಾಮದಲ್ಲಿ 8 ವರ್ಷದ ಹಿಂದೆ ನಟ ಯಶ್ 50 ಎಕರೆ ಜಮೀನು ಖರೀದಿಸಿದ್ದು, ಅಲ್ಲಿಯೇ ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ದಾರೆ. ಈಗ ಫಾರ್ಮ್ ಹೌಸ್ ಗೆತೆರಳಲು ರಸ್ತೆ ನಿರ್ಮಾಣಕ್ಕಾಗಿ ಏಕಾಏಕಿ ಜೆಸಿಬಿ ತಂದು ಅಗೆಯಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Home add -Advt

ತಮಗಿರುವ ಒಂದು ಎಕರೆ, ಎರದು ಎಕರೆ ಜಮೀನು ಜಾಗದಲ್ಲಿ ನಟ ಯಶ್ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಮಗಿರುವ ಜಮೀನನ್ನೇ ಅವರಿಗೆ ಬಿಟ್ಟುಕೊಟ್ಟರೆ ನಮ್ಮ ಜೀವನ ಸಾಗುವುದಾದರೂ ಹೇಗೆ? ನಾವು ಅದೇ ಜಮೀನು ನಂಬಿ ಬದುಕುತ್ತಿದ್ದು, ಯಶ್ ಅವರ ಈ ನಡೆ ಸರಿಯಲ್ಲ್. ಯಾವುದೇ ಕಾರಣಕ್ಕೂ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನಿದುವುದಿಲ್ಲ ಎಂದು ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ.

ಇದರಿಂದ ಸ್ವತ: ಯಶ್ ಗ್ರಾಮಸ್ಥರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದು ಗ್ರಾಮಸ್ಥರನ್ನು ಇನ್ನಷ್ಟು ರೊಚ್ಚಿಗೇಳುವಂತೆ ಮಾಡಿದ್ದು, ಇಡೀ ಗ್ರಾಮಸ್ಥರು ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದು, 420 ಯಶ್ ಎಂದು ಧಿಕ್ಕಾರ ಕೂಗುತ್ತಿದ್ದಾರೆ.

Related Articles

Back to top button