Latest

ಭಾರತೀಯ ಯುವಕ ಕೆನಡಾದಲ್ಲಿ ಗುಂಡೇಟಿಗೆ ಆಹುತಿ

ಪ್ರಗತಿವಾಹಿನಿ ಸುದ್ದಿ, ಟೊರಾಂಟೊ: ಭಾರತೀಯ ಮೂಲದ ಯುವಕರೊಬ್ಬರು ಕೆನಡಾದ ನೈಟ್ ಕ್ಲಬ್ ನಲ್ಲಿ ಗುಂಡೇಟಿಗೆ ಆಹುತಿಯಾಗಿದ್ದಾರೆ.

ಪಂಜಾಬ್ ಮೂಲದ ಪ್ರದೀಪ್ ಬ್ರಾರ್ (26) ಮೃತಪಟ್ಟವರು. ಟೊರಾಂಟೊ ನಗರದ ಬಾಥ್ರಸ್ಟ್ ಸ್ಟ್ರೀಟ್ ನ ನೈಟ್ ಕ್ಲಬ್ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅವರು ಮೃತಪಟ್ಟರು.  ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೊಷಿಸಿದರು.

Home add -Advt

ಈ ಘಟನೆಯಲ್ಲಿ ಮಹಿಳೆಯೊಬ್ಬರು ಕೂಡ ಗಾಯಗೊಂಡಿದ್ದರು. ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.

ಗುಂಡಿನ ದಾಳಿ ಆಕಸ್ಮಿಕವೇ ಅಥವಾ ದುರುದ್ದೇಶಪೂರಿತವೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.  ಪ್ರತ್ಯಕ್ಷ ಸಾಕ್ಷಿಗಳು ಮಾಹಿತಿ ನೀಡಲು ಮುಂದೆ ಬರಬೇಕು ಎಂದು ಸ್ಥಳೀಯ ಪೊಲೀಸರು ಕೋರಿದ್ದಾರೆ. 

ಪ್ರದೀಪ್ ಬ್ರಾರ್ ಅವರು ಒಂದು ವರ್ಷದಲ್ಲಿ ಕೆನಡಾದಲ್ಲಿ ಗುಂಡಿಗೆ ಆಹುತಿಯಾದ 39ನೇ ವ್ಯಕ್ತಿಯಾಗಿದ್ದಾರೆ.

ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬರ್ಬರ ಹತ್ಯೆ

Related Articles

Back to top button