Latest

*ಬದ್ಧವೈರಿಗಳ ಅಪ್ಪುಗೆಗೆ ಕೈ-ಕಮಲ ಕಾರ್ಯಕರ್ತರೇ ಶಾಕ್*

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬ ಮಾತಿದೆ. ಈ ಮಾತಿಗೆ ಈ ನಿದರ್ಶನ ಸಾಕ್ಷಿ ಎಂಬಂತಿದೆ. ರಾಜಕೀಯ ಬದ್ಧವೈರಿಗಳು ಎಂದೇ ಗುರುತಿಸಿಕೊಡಿರುವ ಸಚಿವ ಶ್ರೀರಾಮುಲು ಹಾಗೂ ಮಾಜಿ ಸಚಿವ ಸಂತೋಷ್ ಲಾಡ್ ಪರಸ್ಪರ ಆಲಂಗಿಸಿಕೊಂಡು, ಆತ್ಮೀಯತೆ ಪ್ರದರ್ಶಿಸಿದ್ದು ಕೈ-ಕಮಲ ಕಾರ್ಯಕರ್ತರೇ ಶಾಕ್ ಆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಸಂಡೂರಿನ ಬನ್ನಿಹಟ್ಟಿ ಜಾತ್ರೆಯಲ್ಲಿ ಸಚಿವ ಶ್ರೀರಾಮುಲು ಹಾಗೂ ಸಂತೋಷ್ ಲಾಡ್ ಇಬ್ಬರೂ ಆತ್ಮೀಯರಂತೆ ಸಂಭ್ರಮಿಸಿದ್ದಾರೆ. ಸಚಿವ ಶ್ರೀರಾಮುಲು ಅವರನ್ನು ಸಂತೋಷ್ ಲಾಡ್ ತಬ್ಬಿಕೊಂಡು, ಮುತ್ತಿಟ್ಟಿದ್ದಾರೆ. ಬದ್ಧವೈರಿಗಳ ಅಪ್ಪುಗೆಗೆ ಎರಡೂ ಪಕ್ಷದ ಕಾರ್ಯಕರ್ತರು ಅಚ್ಚರಿಗೊಂಡಿದ್ದಾರೆ.

ಗಣಿನಾಡು ಬಳ್ಳಾರಿ ರಾಜಕೀಯದಲ್ಲಿ ಇದೀಗ ಉಭಯನಾಯಕರ ನಡೆ ಸಂಚಲನ ಮೂಡಿಸಿದೆ.

*ರಮೇಶ್ ಜಾರಕಿಹೊಳಿ- ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಮಯ ನಿಗದಿ; ಮತ್ತಷ್ಟು ಕುತೂಹಲ ಮೂಡಿಸಿದ ಸಿಡಿ ಕೇಸ್*

Home add -Advt

https://pragati.taskdun.com/ramesh-jarakiholimeetamith-shahcd-casecbi/

Related Articles

Back to top button