Kannada NewsKarnataka NewsLatest
ಸೌದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಶ್ರೀಶೈಲ, ಕಾಶಿ ಜಗದ್ಗುರು, ಹುಕ್ಕೇರಿ ಶ್ರೀಗಳ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶ್ರೀಶೈಲ ಜಗದ್ಗುರುಗಳು, ಕಾಶಿ ಜಗದ್ಗುರುಗಳು ಹಾಗೂ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳುಜಿಲ್ಲೆಯ ಸೌದತ್ತಿಯ ಯಲ್ಲಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಜಗನ್ಮಾತೆ ಯಲ್ಲಮ್ಮ ದೇವಿಯ ವಿಶೇಷವಾದ ತೇಜಸ್ಸಿನ ಮೂರ್ತಿಗೆ ಕುಂಕುಮಾರ್ಚನೆಯನ್ನು ಶ್ರೀಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಸವದತ್ತಿಯ ಶಾಸಕ ಆನಂದ ಮಾಮನಿ ಅವರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ರವಿ ಕೊಟಾರಗಸ್ತಿ ಅವರು ಎಲ್ಲರನ್ನೂ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಕಾಶಿ ಜಗದ್ಗುರುಗಳು ಮಾತನಾಡಿ, ದೇವಿಯ ಕ್ಷೇತ್ರ ಬಹಳ ಶ್ರೇಷ್ಠವಾಗಿರುವ ಕ್ಷೇತ್ರ. ಈ ಕ್ಷೇತ್ರದ ಸದ್ಬಳಕೆಯನ್ನು ಎಲ್ಲರೂ ಮಾಡಿಕೊಳ್ಳಬೇಕು ಎಂದರು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶಾಸಕ ಆನಂದ ಮಾಮನಿಯವರ ಪರಿಶ್ರಮದ ಫಲ ಇವತ್ತು ಕ್ಷೇತ್ರ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಈ ಕ್ಷೇತ್ರದ ಶಾಸಕರು ಎಲ್ಲರೊಂದಿಗೆ ಬೆರೆತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ರವಿ ಕೋಟಾರಗಸ್ತಿ ಅವರ ಆಡಳಿತ ಇನ್ನೂ ಹೆಚ್ಚು ಹೆಚ್ಚು ಕಾರ್ಯವನ್ನು ನಿರ್ವಹಿಸಲಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ