ಪತಿ-ಪತ್ನಿ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆಯೇ ಹಲ್ಲೆ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ತೆಲೆಗೆ ಕೊಡಲಿಯಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಪೇದೆ ತಲೆಗೆ 14 ಹೊಲಿಗೆ ಹಾಕಲಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹರೆಕಲ್ಲ ದೊಡ್ಡಿಯಲ್ಲಿ ಘಟನೆ ನಡೆದಿದ್ದು, ದಂಪತಿಗಳ ಜಗಳ ಬಿಡಿಸಲು ಹೋಗಿದ್ದ ಪೇದೆ ತಲೆಗೆ ಕೊಡಲಿ ಪೆಟ್ಟು ಬಿದ್ದಿದೆ. ಗ್ರಾಮದ ವೆಂಕಟರಾಮು- ಆಶಾ ದಂಪತಿ ಜಗಳವಾಡಿಕೊಂಡಿದ್ದಾರೆ. ದೂರು ಬಂದ ಹಿನ್ನೆಲೆ ಮುಖ್ಯ ಪೇದೆ ಗುರುಶಾಂತಪ್ಪ ಜಗಳ ಬಿಡಿಸಲು ತೆರಳಿದ್ದು, ಈ ವೇಳೆ ಪಾನಮತ್ತನಾಗಿದ್ದ ಪತಿ ವೆಂಕಟರಾಮು ಪೇದೆಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

Home add -Advt

ತೀವ್ರವಾಗಿ ಗಾಯಗೊಂಡ ಪೇದೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದಂಪತಿಯನ್ನು ಬಂಧಿಸಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button