Kannada NewsLatestPolitics
*ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೂ ತಟ್ಟಿದ ಮಳೆ ಹೊಡೆತ: ಕಾಂಪೌಂಡ್ ಮೇಲೆ ಮುರಿದು ಬಿದ್ದ ಮರಗಳು, ಕಬ್ಬಿಣದ ವಾಲ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಕೇವಲ ಒಂದು ಗಂಟೆಯ ಮಳೆ ಸಾಕಷ್ಟು ಅನಾಹುತಗಳನ್ನು, ಅವಾಂತರಗಳನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೂ ಮಳೆ ಹೊಡೆತ ತಟ್ಟಿದೆ.
ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಿಂದಾಗಿ ಸಿಎಂ ಕಾವೇರಿ ನಿವಾಸದ ಕಾಂಪೌಂಡ್ ಮೇಲೆ ಮರಗಳು ಬಿದ್ದಿವೆ. ಅಲ್ಲದೇ ಕಾಂಪೌಂಡ್ ಮೇಲೆ ಗಾಲ್ಫ್ ಕ್ಲಬ್ ನ ಕಬ್ಬಿಣದ ವಾಲ್ ಗಳು ಬಿದ್ದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮನೆಯಲ್ಲಿದ್ದಾಗಲೇ ಈ ಘಟನೆಗಳು ನಡೆದಿವೆ.
ಇಂದು ಸ್ಥಳಕ್ಕೆ ಧಾವಿಸಿರುವ ಜಿಬಿಎ ಸಿಬ್ಬಂದಿಗಳು ಮರಗಳನ್ನು ತೆರವು ಮಾಡುವ ಕಾರ್ಯ ನಡೆಸಿದ್ದಾರೆ. ಕಾವೇರಿ ನಿವಾಸದ ಕಾಂಪೌಂಡ್ ಮೇಲೆ ಸುಮಾರು ನಾಲ್ಕೈದು ಮರಗಳು ಮುರಿದು ಬಿದ್ದಿವೆ.



