Belagavi NewsBelgaum NewsKannada NewsKarnataka NewsLatest

*ಕಾರು ಅಪಘಾತದ ನಂತರ ಲಕ್ಷ್ಮಣ ಸವದಿ ಮೊದಲ ಪ್ರತಿಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತೆರಳುತ್ತಿದ್ದ ಕಾರು ಸೋಮವಾರ ಸಂಜೆ ಅಪಘಾತಕ್ಕೀಡಾಗಿತ್ತು.

ಆದರೆ ಅವರಿಗಾಗಲಿ, ಚಾಲಕನಿಗಾಗಲಿ ಯಾವುದೇ ಅಪಾಯವಾಗಲಿಲ್ಲ.

Home add -Advt

ಘಟನೆ ನಂತರ ಸವದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

ಭಗವಂತ ಹಾಗೂ ಶ್ರೀ ಶಿವಯೋಗಿಗಳ ಕೃಪಾಶೀರ್ವಾದ ಹಾಗೂ ಎಲ್ಲ ಹರ ಗುರು ಚರಮೂರ್ತಿಗಳ ಹಾಗೂ ಕ್ಷೇತ್ರದ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಸುರಕ್ಷಿತವಾಗಿದ್ದೆನೆ ಎಂದು ಹೇಳಿದ್ದಾರೆ.

ಅವರ ಪೋಸ್ಟ್ ಹೀಗಿದೆ:

ಇಂದು ಸಂಜೆ ಬೆಳಗಾವಿ ಮೂಲಕ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ದರೂರ ಗ್ರಾಮದ ಹತ್ತಿರ ನನ್ನ ವಾಹನ ಚಿಕ್ಕ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಯಾರಿಗೂ ಪ್ರಾಣ ಅಪಾಯ ಸಂಭವಿಸಿಲ್ಲ ಭಗವಂತ ಹಾಗೂ ಶ್ರೀ ಶಿವಯೋಗಿಗಳ ಕೃಪಾಶೀರ್ವಾದ ಹಾಗೂ ಎಲ್ಲ ಹರ ಗುರು ಚರಮೂರ್ತಿಗಳ ಹಾಗೂ ಕ್ಷೇತ್ರದ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಸುರಕ್ಷಿತವಾಗಿದ್ದೆನೆ.

ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇವಾಗ ಸದ್ಯ ನಾನು ಕೆಲಸದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದು ಬೆ೦ಗಳೂರಿನಿ೦ದ ಬ೦ದ ನಂತರ ಗೃಹ ಕಛೇರಿಯಲ್ಲಿ ತಮ್ಮಲ್ಲರನ್ನು ಭೇಟಿಯಾಗುತ್ತೇನೆ.

ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ.

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ https://pragativahini.com/lakshmana-savadi-car-accident/

Related Articles

Back to top button