GIT add 2024-1
Laxmi Tai add
Beereshwara 33

*ರಾಜಕೀಯ ನಿವೃತ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕರಾಣದ ಮೋಸ್ಟ್ ಪಾವರಫುಲ್ ಲೀಡರ್ ಎರಡನೆ ಸಲ ಸಿಎಂ ಆಗಿ ಉತ್ತಮ ಆಡಳಿತ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.‌ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ರಾಜಕೀಯ ನಿವೃತ್ತಿಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

Emergency Service

ಈ ಹಿಂದೆಯೂ ಕೂಡಾ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು ಆದರೆ ಜನರ ಒತ್ತಡಕ್ಕೆ ಹಾಗೂ ಪಕ್ಷದ ಒತ್ತಡಕ್ಕೆ ಮಣಿದು ಚುನಾವಣೆ ಸ್ಪರ್ಧಿಸಿ ಎರಡನೆಯ ಸಲ ಸಿಎಂ ಆಗಿದ್ದಾರೆ.‌

ಮೈಸೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ನಾನು ಕೂಲ್ ಆಗಿ ಇದ್ದೇನೆ. ಜನ ನಮಗೆ ಬೆಂಬಲ ಕೊಡುತ್ತಾರೆ ಎಂಬ ‌ನಂಬಿಕೆ ಇದೆ. ಮುಂದಿನ ಚುನಾವಣೆ ವೇಳೆ ನನಗೆ 83 ವರ್ಷ ವಯಸ್ಸಾಗುತ್ತೆ. ಆಗ ಅಷ್ಟೊಂದು ಉತ್ಸಾಹದಿಂದ ನನಗೆ ಕೆಲಸ ಮಾಡಲು ಆಗಲ್ಲ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತು. ಹೀಗಾಗಿ, ಚುನಾವಣಾ ರಾಜಕಾರಣ ಸಾಕು ಎಂದು ತೀರ್ಮಾನಿಸಿದ್ದೇನೆ ಎಂದು ತಮ್ಮ ನಿವೃತ್ತಿಗೆ ಕಾರಣವನ್ನು ಕೂಡಾ ನೀಡಿದ್ದಾರೆ.

Bottom Add3
Bottom Ad 2