Karnataka NewsLatestPolitics

*ಸೆಪ್ಟೆಂಬರ್ 21 ರಿಂದ ವಿಶೇಷ ಅಧಿವೇಶನ: ಪ್ರಶ್ನೋತ್ತರ ಕಲಾಪಕ್ಕೆ ಅವಕಾಶವಿಲ್ಲ ಎಂದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಭೀಕರ ಬರಗಾಲ ಹಾಗೂ ಪಶ್ಚಿಮ ಘಟ್ಟಗಳ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆಪ್ಟೆಂಬರ್ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿದೆ. ಆದರೆ ಯಾವುದೇ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದ್ದು, ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಶ್ನೋತ್ತರ ಕಲಾಪವಿಲ್ಲದೆ ಕೇವಲ ಪ್ರಮುಖ ರೈತ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಈ ಅಧಿವೇಶನ ಮೀಸಲಿರಲಿದೆ. ಮಳೆಗಾಲದ ಅಧಿವೇಶನ ಯಾವುದೇ ಚರ್ಚೆಯಿಲ್ಲದೆ, ಪ್ರತಿಪಕ್ಷಗಳ ಪ್ರತಿಭಟನೆಯಲ್ಲೇ ಕಳೆದುಹೋಗಿತ್ತು. ಹೀಗಾಗಿ ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ, ಜಾನುವಾರುಗಳ ಮೇವಿನ ಅಭಾವ ಹಾಗೂ ಪಶ್ಚಿಮ ಘಟ್ಟಗಳ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಸರ್ಕಾರ ಸೆಪ್ಟೆಂಬರ್ 21, 22 ಮತ್ತು 23 ರಂದು ವಿಶೇಷ ಅಧಿವೇಶನ ಕರೆದಿದೆ. ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿರುವ ತಾಲೂಕುಗಳ ಸ್ಥಿತಿಗತಿ ಹಾಗೂ ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಸದನದಲ್ಲಿ ವಿಸ್ತೃತವಾಗಿ ಸಂವಾದ ನಡೆಯಲಿದೆ.

Home add -Advt

ವಿಶೇಷ ಅಧಿವೇಶನದ ಅಜೆಂಡಾ:

101 ತಾಲೂಕುಗಳಲ್ಲಿ ತೀವ್ರ ಬರ: ಕುಡಿಯುವ ನೀರು ಹಾಗೂ ಮೇವಿನ ಬಿಕ್ಕಟ್ಟಿನ ಬಗ್ಗೆ ಚರ್ಚೆ.
ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ವಲಯದ ಜನರ ಹಿತರಕ್ಷಣೆಗಾಗಿ ಜಂಟಿ ವಿರೋಧ ನಿರ್ಣಯ.
ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಇದನ್ನು ಈ ಹಿಂದೆಯೇ ತಿರಸ್ಕರಿಸಿರುವ ರಾಜ್ಯ ಸರ್ಕಾರ.
ತೋಟಗಾರಿಕೆ ಫಾರ್ಮ್‌ಗಳ ಜಮೀನು ಪರಭಾರೆ ತಿದ್ದುಪಡಿ ವಿಧೇಯಕದ ಬಗ್ಗೆ ಸ್ಪಷ್ಟನೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಮರುಪರಿಶೀಲನೆಗೆ ಒತ್ತಾಯ.
ಕಸ್ತೂರಿ ರಂಗನ್ ವರದಿ: ಕೇಂದ್ರಕ್ಕೆ ಒಮ್ಮತದ ವಿರೋಧ ನಿರ್ಣಯ ಕಳುಹಿಸಲು ಯೋಜನೆ

ಕಸ್ತೂರಿ ರಂಗನ್ ವರದಿಯಡಿ ಪಶ್ಚಿಮ ಘಟ್ಟದ ಶೇ 37 ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಇದನ್ನು ಈ ಹಿಂದೆಯೇ ತಿರಸ್ಕರಿಸಿರುವ ರಾಜ್ಯ ಸರ್ಕಾರ, ಈ ಅಧಿವೇಶನದಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು, ಕೃಷಿ ಹಾಗೂ ಮೂಲಸೌಕರ್ಯಕ್ಕೆ ಧಕ್ಕೆಯಾಗದಂತೆ ಕೇಂದ್ರಕ್ಕೆ ಜಂಟಿ ಸದನದ ಮೂಲಕ ಒಮ್ಮತದ ವಿರೋಧ ನಿರ್ಣಯ ಕಳುಹಿಸಲು ಯೋಜಿಸಿದೆ.

ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಗದ್ದಲದಿಂದ ಬರಗಾಲದ ಚರ್ಚೆ ನಡೆದಿರಲಿಲ್ಲ, ಹೀಗಾಗಿ ಈ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರೈತರ ಸದ್ಯದ ಬದುಕಿನ ಸವಾಲುಗಳ ಬಗ್ಗೆ ಚರ್ಚಿಸಲೇ ಈ ಅಧಿವೇಶನ ಮೀಸಲು ಮೀಸಲಾಗಿದೆ ಎಂದು ಡಿಸಿಎಂ ಪರಮೇಶ್ವರ ಹೇಳಿದ್ದಾರೆ.

ವಿದ್ಯುತ್ ಅಭಾವ, ಮೋಡ ಬಿತ್ತನೆ ವೈಫಲ್ಯದ ಬಗ್ಗೆ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಅಧಿವೇಶನ ಯಾವ ರೀತಿ ಇರಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. ಇನ್ನೊಂದೆಡೆ, ರಾಜ್ಯದಲ್ಲಿನ ವಿದ್ಯುತ್ ಅಭಾವ, 28 ಕೋಟಿ ರೂ. ವೆಚ್ಚದ ಮೋಡ ಬಿತ್ತನೆ ಯೋಜನೆಯ ವೈಫಲ್ಯ ಹಾಗೂ ಬಿಡದಿ ಟೌನ್ ಶಿಫ್, ನೈಸ್ ಟೋಲ್ ವಿಚಾರಗಳನ್ನು ಎತ್ತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ. ಆದರೆ ಅಧಿವೇಶನದಲ್ಲಿ ಯಾವುದೇ ಪ್ರಶ್ನೋತ್ತರಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Related Articles

Back to top button