Belagavi NewsBelgaum NewsKannada NewsKarnataka News

ಗ್ರಾಮೀಣ ಕ್ಷೇತ್ರದಲ್ಲಿ ಕ್ರೀಡೆಗೆ ಅತೀ ಹೆಚ್ಚು ಪ್ರೋತ್ಸಾಹ :  ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜಗರಣಿ ಗ್ರಾಮದ ಶ್ರೀ ಬ್ರಹ್ಮಲಿಂಗ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿ, ಚಾಲನೆ ನೀಡಿದರು.

ಗ್ರಾಮೀಣ ಕ್ಷೇತ್ರದಲ್ಲಿ ಕ್ರೀಡೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಸರಕಾರದಿಂದಷ್ಟೇ ಅಲ್ಲ, ವಯಕ್ತಿಕವಾಗಿ ಹಾಗೂ ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಸಹ ಸಾಕಷ್ಟು ಸಹಾಯ ಮಾಡಲಾಗುತ್ತಿದೆ. ಯುವಕರು ಹಾಗೂ ಮಕ್ಕಳು ಸರ್ವಾಂಗೀಣ ಅಭಿವೃದ್ಧಿಯಾಗಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ನಾಯ್ಕ್, ಮನೋಹರ್ ಬೆಳಗಾಂವ್ಕರ್, ನಾಮದೇವ್ ಮೋರೆ, ಅಶೋಕ ಕಾಂಬಳೆ, ಸಂತೋಷ ಕಾಂಬಳೆ, ಶಿವಾಜಿ ಬೋಕಡೆ, ತಾನಾಜಿ ಬಿ, ಶಿವಾಜಿ ರಾಕಸೆ, ಮಂಗಲ ಜಾಧವ್, ಪ್ರಕಾಶ ಬಾಸ್ಕಳ್, ಕಲ್ಲಪ್ಪ ಬಾಸ್ಕಳ್, ಗುರುನಾಥ ಪಾಟೀಲ, ಜಯವಂತ ಬಾಳೇಕುಂದ್ರಿ, ಬಾಳು ದೇಸೂರಕರ್, ಮಹೇಶ ಪಾಟೀಲ, ಸಚಿನ್ ಜಾಧವ್, ಶಿವಾಜಿ ಮಂದಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button