Kannada NewsKarnataka NewsLatest

ಶ್ರೀ ಯಲ್ಲಾಲಿಂಗೇಶ್ವರರ ದರ್ಶನಕ್ಕೆ ಸೋಮವಾರದಿಂದ ಅವಕಾಶ

ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ  ಮಾರಣಾಂತಿಕ ಕಾಯಿಲೆ ಕೊರೋನ ವೈರಸ್ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆ, ಸಮಾರಂಭಗಳು ಮತ್ತು ದೇವಾಲಯಗಳ ಬಾಗಿಲುಹಾಕಿ ದರ್ಶನ ನಿರ್ಭಂದಿಸಲಾಗಿತ್ತು.

ಇಂದು ಸರ್ಕಾರದ ಆದೇಶದೊಂದಿಗೆ ಮುಕ್ತಿಮಂದಿರ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದ ಬಾಗಿಲು ತೆಗೆದು ಭಕ್ತರಿಗೆ ದರ್ಶನ ಭಾಗ್ಯ ಸೋಮವಾರದಿಂದ ಲಭಿಸಲಿದೆ. ಮಠಕ್ಕೆ ಬರುವ ಭಕ್ತರು ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿ ಆಗಮಿಸಬೇಕು ಮತ್ತು ಮಠದಲ್ಲಿ ತೀರ್ಥ ಹಾಗೂ ಪ್ರಸಾದದ ವ್ಯವಸ್ಥೆ ಇರುವುದಿಲ್ಲ ಎಂದು ಶ್ರೀ ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button