ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶಾದ್ಯಂತ ನಡೆದ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಅಧಿಕೃತವಾಗಿ ಆರಂಭವಾಗಿದೆ.
ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ನಂತರ ಇವಿಎಂ ತೆರೆಯಲಾಗುತ್ತದೆ. ಈ ಬಾರಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿರುವುದರಿಂದ ಪ್ರತಿಬಾರಿಯಷ್ಟು ವೇಗವಾಗಿ ಫಲಿತಾಂಶ ಸಿಗುವುದು ಕಷ್ಟ.
ಪಶ್ಚಿಮ ಬಂಗಾಳ ಫಲಿತಾಂಶ ಎಲ್ಲಕ್ಕಿಂತ ಹೆಚ್ಚು ಕುತೂಹಲ ಮೂಡಿಸಿದ್ದು, ತಮಿಳುನಾಡು, ಕೇರಳ, ಆಸ್ಸಾಂ, ಪುದುಚೆರಿ ವಿಧಾನಸಭೆ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟವಾಗಲಿದೆ.
ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮತ ಎಣಿಕೆ ಕಾರ್ಯ ಕೂಡ ಆರಂಭವಾಗಿದೆ.
ಮಧ್ಯಾಹ್ನದ ಹೊತ್ತಿಗೆ ಟ್ರೆಂಡ್ ಗೊತ್ತಾಗಲಿದ್ದು, ಪೂರ್ಣ ಫಲಿತಾಂಶಕ್ಕೆ ಸಂಜೆಯವರೆಗೂ ಕಾಯಬೇಕಾಗಬಹುದು.
ಪ್ರಗತಿವಾಹಿನಿ ಮತ ಎಣಿಕೆಯ ಸಮಗ್ರ ಮಾಹಿತಿಯನ್ನು ಕ್ಷಣ ಕ್ಷಣಕ್ಕೂ ಒದಗಿಸಲಿದೆ. ಕೊರೋನಾ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಗೆ ಬರದೆ ಮನೆಯಲ್ಲಿ ಸುರಕ್ಷಿತವಾಗಿದ್ದೇ ಫಲಿತಾಂಶ ಪಡೆಯಿರಿ.
ಲೋಕಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ
ರಾಜ್ಯದಲ್ಲಿ ಒಂದೇ ದಿನ 271 ಜನರ ಸಾವು; ರಾಜ್ಯದ ಸ್ಥಿತಿ-ಗತಿ ಸಮಗ್ರ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ