Kannada NewsKarnataka News

15 ಕ್ಷೇತ್ರಗಳ ಉಪಚುನಾವಣೆಗೆ ತಡೆ -ನಿಜವಾದ ಪ್ರಗತಿವಾಹಿನಿ ವರದಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಕರ್ನಾಟಕದಲ್ಲಿ ಅಕ್ಟೋಬರ್ 21ರಂದು ನಡೆಯಬೇಕಿದ್ದ 15 ಕ್ಷೇತ್ರಗಳ ಉಪಚುನಾವಣೆಗೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಕ್ಟೋಬರ್ 22ರಂದು ಈ ಸಂಬಂಧ ಮುಂದಿನ ವಿಚಾರಣೆ ನಡೆಸಿದ ಬಳಿಕ ಸುಪ್ರಿಂ ಕೋರ್ಟ್ ಚುನಾವಣೆ ನಡೆಯುವ ಬಗ್ಗೆ ತಿಳಿಸುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಪ್ರಕಟಿಸಿದ್ದ ವರದಿ ಇಲ್ಲಿದೆ – ಚುನಾವಣೆಯೇ ರದ್ದಾಗುತ್ತಾ? -ಸುಪ್ರಿಂ ತೀರ್ಪು ಏಕೆ ಮಹತ್ವ ಗೊತ್ತಾ?

17 ಕ್ಷೇತ್ರಗಳ ಶಾಸಕರ ಅನರ್ಹತೆ ಸಂಬಂಧ ವಿಚಾರಣೆ ನಡೆಸುತ್ತಿದ್ದ ಸುಪ್ರಿಂ ಕೋರ್ಟ್ ಅ.21ರಂದು ನಡೆಯಲಿದ್ದ ಚುನಾವಣೆಗೆ ತಡೆ ನೀಡಿದೆ. ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.22ರಂದು ಮುಂದಿನ ವಿಚಾರಣೆ ನಡೆಯಲಿದೆ.

ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿ ಚುನಾವಣೆ ಆಯೋಗ ಘೋಷಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿತ್ತು. ಅನರ್ಹತೆ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ ಚುನಾವಣೆ ಘೋಷಣೆ ಮಾಡಿದ್ದು ಎಲ್ಲರಿಗೂ ಆಶ್ಚರ್ಯ ಉಂಟಾಗಿತ್ತು.

ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಸಿದ್ದತೆಯಲ್ಲಿ ತೊಡಗಿದ್ದವು. ಅಭ್ಯರ್ಥಿ ಆಯ್ಕೆ ಕಸರತ್ತಿನಲ್ಲಿದ್ದವು. ಆದರೆ ಅಂತಿಮವಾಗಿ ಚುನಾವಣೆ ಸಧ್ಯಕ್ಕಿಲ್ಲ ಎನ್ನುವ ತೀರ್ಪು ಹೊರಬಿದ್ದಿದೆ.

ಈ ಬಗ್ಗೆ ಪ್ರಗತಿವಾಹಿನಿ ಈಗಾಗಲೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅದು ನಿಜವಾದಂತಾಗಿದೆ.

ಪ್ರಗತಿವಾಹಿನಿ ಪ್ರಕಟಿಸಿದ್ದ ವರದಿ ಇಲ್ಲಿದೆ –ಚುನಾವಣೆಯೇ ರದ್ದಾಗುತ್ತಾ? -ಸುಪ್ರಿಂ ತೀರ್ಪು ಏಕೆ ಮಹತ್ವ ಗೊತ್ತಾ?

ಅನರ್ಹರಿಗೆ ಶಾಕ್ -ಹಠಾತ್ ಉಪಚುನಾವಣೆ ಘೋಷಣೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button