ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಲೋಕಸಭಾ ವ್ಯಾಪ್ತಿಯ ಪಟ್ಟಣಕುಡಿ ಗ್ರಾಮದಲ್ಲಿ ಗೌರಾಯಿಮರಡಿ ಪಟ್ಟಣಕುಡಿ ವ್ಹಾಯಾ ಚಿಕಲವಾಳ ದಿಂದ ಖಡಕಲಾಟ ಗ್ರಾಮದವರೆಗೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ ಸುಮಾರು 4 ಕೋಟಿ 28 ಲಕ್ಷ ರೂ. ಮೊತ್ತದಲ್ಲಿ, 7.13 ಕಿ.ಮೀ. ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೂಮಿ ಪೂಜೆ ನೆರವೇರಸಿ, ಚಾಲನೆ ನೀಡಿದರು.
ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಪರ್ಕ ಸುಗಮವಾಗುತ್ತದೆ. ಈ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು ಹಂತ ಹಂತವಾಗಿ ಪ್ರಗತಿಯ ಪಥದತ್ತ ಹೆಜ್ಜೆ ಇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಸ್ತೆಗಳನ್ನು ಅಭಿವೃದ್ಧಿ ಮಾಡಿ, ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿಷೇಕ ಪಾಟೀಲ, ಮೋಹನ ಗುಮ್ಮಟನವರ, ಸೋಮಶೇಖರ ಸರವಡೆ, ಈರಯ್ಯ ಜಂಗಮ, ಮನೋಜ ಡುಗ್ಗೆ, ಅಣ್ಣಾಸಾಬ ಕಾಗೆ, ಸೋಮು ನಾಯಿಕ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ