Belagavi NewsBelgaum NewsKannada NewsKarnataka NewsLife StyleNational

*ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ*

ಪ್ರಗತಿವಾಹಿನಿ ಸುದ್ದಿ: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ಹೊಸ ದಾಖಲೆ ಮಟ್ಟಕ್ಕೆ ತಲುಪಿದ್ದು ಚಿನ್ನ ಖರೀದಿಸಲು ಮುಂದಾಗಿದ್ದ ಗ್ರಾಹಕರಿಗೆ ದಿಢೀರ್ ಬೆಲೆ ಏರಿಕೆ ಆಘಾತ ನೀಡಿದೆ.

ಆಭರಣ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರ ₹3,050 ಏರಿಕೆಯಾಗಿದ್ದು, 10 ಗ್ರಾಂಗೆ ₹1,42,400ಕ್ಕೆ ತಲುಪಿದೆ.

Home add -Advt

ಕಳೆದ ಕೆಲ ದಿನಗಳ ಬೆಲೆ ಇಳಿಕೆಯನ್ನು ಗಮನಿಸಿ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಈ ದಿಢೀರ್ ಏರಿಕೆ ನಿರಾಸೆ ಮೂಡಿಸಿದೆ. ಅಲ್ಪಾವಧಿಯಲ್ಲೇ ಸಾವಿರಾರು ರೂಪಾಯಿ ಏರಿಕೆಯಾಗಿರುವುದು ಮಾರುಕಟ್ಟೆಯಲ್ಲೂ ಗಮನ ಸೆಳೆದಿದೆ.

ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ವಿಜಯವಾಡ ಹಾಗೂ ವಿಶಾಖಪಟ್ಟಣಂನಲ್ಲಿ ಚಿನ್ನದ ದರ ಬಹುತೇಕ ಒಂದೇ ಮಟ್ಟದಲ್ಲಿದೆ. ಇಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನ ₹1,55,350ಕ್ಕೆ ಹಾಗೂ 22 ಕ್ಯಾರೆಟ್ ಚಿನ್ನ ₹1,42,400ಕ್ಕೆ ಮಾರಾಟವಾಗುತ್ತಿದೆ.

ದೆಹಲಿಯಲ್ಲಿ ಚಿನ್ನದ ದರ ದಕ್ಷಿಣ ಭಾರತದ ನಗರಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನ ₹1,55,500 ಹಾಗೂ 22 ಕ್ಯಾರೆಟ್ ಚಿನ್ನ ₹1,42,550ಕ್ಕೆ ತಲುಪಿದೆ.

ಚಿನ್ನದ ಜತೆಗೆ ಬೆಳ್ಳಿ ದರವೂ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2.50 ಲಕ್ಷಕ್ಕೆ ಏರಿಕೆಯಾಗಿದೆ.

ನಿನ್ನೆಯ ದರಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆಯಲ್ಲಿ ಒಂದೇ ದಿನ ₹5,000 ಹೆಚ್ಚಳವಾಗಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ದರ ₹2,49,900ರ ಆಸುಪಾಸಿನಲ್ಲಿದೆ.

ಚಿನ್ನ ಮತ್ತು ಬೆಳ್ಳಿ ಎರಡೂ ಒಂದೇ ದಿನದಲ್ಲಿ ಗಮನಾರ್ಹ ಏರಿಕೆ ಕಂಡಿರುವುದರಿಂದ ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರು ಇದೀಗ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದನ್ನು ಕಾದುನೋಡುವಂತಾಗಿದೆ.

Related Articles

Back to top button