Kannada NewsKarnataka NewsNationalPoliticsTechTravelWorld

*ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ವಾಪಸ್ ಆದ ಸುನೀತಾ ಮತ್ತು ಬುಚ್*

ಪ್ರಗತಿವಾಹಿನಿ ಸುದ್ದಿ: ಅಂತರಿಕ್ಷ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಕೊನೆಗೂ ತಮ್ಮ ಸುಧೀರ್ಘ ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ಮರಳಿದ್ದಾರೆ. 

ಕೇವಲ 9 ದಿನಗಳ ಬಾಹ್ಯಾಕಾಶ ಪಯಣಕ್ಕಾಗಿ ಹೊರಟಿದ್ದ ಸುನಿತಾ ಮತ್ತು ಬುಚ್ ತಾಂತ್ರಿಕ ತೊಂದರೆಯಿಂದಾಗಿ 9 ತಿಂಗಳ ಕಾಲ ಅಂತರಿಕ್ಷದಲ್ಲೇ ಉಳಿಯುವಂತಾಗಿತ್ತು.

ಕೃಶ ಶರೀರವಾಗಿರುವ ಬುಚ್ ಮತ್ತು ಸುನೀತಾ ಭೂಮಿಗೆ ಬಂದೊಡನೆ ಎಲ್ಲರತ್ತಾ ಕೈಬೀಸಿ ನಗುಬೀರಿದರು. ಇನ್ನು ಮುಂದಿನ 45 ದಿನ ಅವರಿಗೆ ಆರೈಕೆ ನೀಡಲಾಗುತ್ತಿದ್ದು ಬೆಚ್ಚಗಿನ ಉಡುಗೆ ಮತ್ತು ಪೋಷಕಾಂಶ ಉಳ್ಳ ಆಹಾರ ನೀಡುವುದಾಗಿ ನಾಸಾ ತಿಳಿಸಿದೆ.

ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ನಾವು ಜನರಿಗೆ ನೀಡಿದ್ದ ವಚನವನ್ನು ಉಳಿಸಿಕೊಂಡಿದ್ದೇವೆ. ಸುನಿತಾ ಮತ್ತು ಬುಚ್ ತಂಡವನ್ನು ಯಶಸ್ವಿಯಾಗಿ ಭೂಮಿಗೆ ತರಲು ಇಂದು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Home add -Advt

ಪ್ರಧಾನಿ ನರೇಂದ್ರ ಮೋದಿ ನೀವು ನನ್ನ ಹೃದಯಕ್ಕೆ ಹತ್ತಿರದಲ್ಲಿದ್ದೀರಿ. ಭಾರತದ 140 ಕೋಟಿ ಜನರಿಗೆ ನಿಮ್ಮ ಸಾಧನೆ ಬಗ್ಗೆ ಹೆಮ್ಮೆ ಇದೆ. ಭಾರತಕ್ಕೆ ಆಗಮಿಸುವುದನ್ನು ಕಾಯುತ್ತಿದ್ದೇವೆ ಎಂದಿದ್ದಾರೆ.

Related Articles

Back to top button