*ಪ್ರಗತಿವಾಹಿನಿ ವರದಿ ಇಂಪ್ಯಾಕ್ಟ್* :*ಸುರೇಬಾನ ನಾಡಕಚೇರಿಗೆ ರಿಪೇರಿ ಭಾಗ್ಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಇರುವ ನಾಡಕಚೇರಿಯ ಮೇಲ್ಚಾವಣಿ ಸಂಪೂರ್ಣ ಹಾಳಾಗಿದ್ದು, ಮಳೆಗಾಳಿಗೆ ಅಲ್ಲಿನ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಗತಿವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಲೆ ಎಚ್ಚೆತ್ತಿರುವ ಅಧಿಕಾರಿಗಳು, ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ನಾಡ ಕಚೇರಿಯೊಳಗೆ ಮಳೆಗೆ ಮೇಲ್ಚಾವಣೆಯಿಂದ ಹಾಗೂ ಚರಂಡಿ ನೀರಿನಿಂದ ಕಚೇರಿಯ ದಾಖಲೆಗಳು, ಸಲಕರಣೆಗಳು ಹಾಳಾಗುತ್ತಿದ್ದವು. ಇದನ್ನು ಕಂಡು ಕಾಣದ ಹಾಗೆ ಅಧಿಕಾರಿಗಳು ಇದ್ದರು. ಆದರೆ ನಾಡಕಚೇರಿಯಲ್ಲಿ ಆಗುತ್ತಿರುವ ಅವಾಂತರದ ಕುರಿತು ಪ್ರಗತಿವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಸಹಾಯದೊಂದಿಗೆ ಛಾವಣಿ ಮೇಲೆ ಒಡೆದು ಹೋದ ಹಂಚು ಹಾಗೂ ಪ್ಲಾಸ್ಟಿಕ್ ತಾಡಪತ್ರಿ ಹಾಕಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಚೇರಿಯ ಉಪ ತಹಶಿಲ್ದಾರ ಎಸ್.ಬಿ. ಮಡಿವಾಳರ ಅವರು, ಈಗ ನಾಲ್ಕೈದು ದಿನಗಳ ಕಾಲ ಮಳೆ ಇರುವುದರಿಂದ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಸಲಾಗಿದೆ, ಮಳೆ ಕಡಿಮೆಯಾದ ಮೇಲೆ ಪತ್ರಾಸ್ ಹಾಕಲಾಗುವುದು ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ