ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣರಾಜ್ಯೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲಾ ಸಿ.ಎಸ್.ಸಿ-ವಿ.ಎಲ್.ಇ ಅಸೋಶಿಯೇಶನ್ ವತಿಯಿಂದ ಸದಾಶಿವ ನಗರದಲ್ಲಿನ ‘ನಂದನ ಮಕ್ಕಳ ಧಾಮ’ದ ಹೆಚ್.ಐ.ವಿ ಪೀಡಿತ ಮಕ್ಕಳಿಗೆ ಸಿಹಿ, ಊಟ, ಮಾಸ್ಕ್, ಸ್ಯಾನಿಟೈಸರ್ ಹಂಚಲಾಯಿತು ಜೊತೆಗೆ ಸಂಸ್ಥೆಗೆ ಫ್ಲೆಕ್ಸ್ ಮತ್ತು ಬೋಡ್9ಗಳನ್ನು ದೇಣಿಗೆ ನೀಡಲಾಯಿತು.
ನಂದನ ಮಕ್ಕಳ ಧಾಮದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಅನಾಥ, ನಿರ್ಗತಿಕ ಮತ್ತು ಹೆಚ್.ಐ.ವಿ ಪೀಡಿತ ಮಕ್ಕಳು ಆಶ್ರಯ ಪಡೆದಿದ್ದು, ಹಲವಾರು ವಷ9ಗಳಿಂದ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಸಿ.ಎಸ್.ಸಿ-ವಿ.ಎಲ್.ಇ ಅಸೋಶಿಯೇಶನ್ ಅಧ್ಯಕ್ಷ ರಾಮಚಂದ್ರ ಭದರಗಡೆ, ಉಪಾಧ್ಯಕ್ಷ ಅಂಜುಮ್ ಸಂಗೊಳ್ಳಿ, ಮುಕ್ತೇಶ ಉಭಾಳೆ ಹಾಗೂ ಇತರೆ ಸದಸ್ಯರಾದ ಸಂಜೀವ ಮಹಿಶಾಳೆ, ಅಮಿತ ಸುಬೇದಾರ, ಉದಯ ಬರಬರಿ, ಸಮೀವುಲ್ಲಾ ಮುಲ್ಲಾ, ಶಕೀಲ್ ಮುಲ್ಲಾ, ಸಿದರಾಯಿ ಗಿಡ್ಡಣ್ಣವರ, ರಾಜು ಓಡಣ್ಣವರ, ಕಾಮಣ್ಣ ಚೌಗುಲೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ