*ಜೊಲ್ಲೆ ಗ್ರುಪ್ನಿಂದ 55 ನೂತನ ಶಾಖೆಗಳ ಆರಂಭ: ಅಣ್ಣಾಸಾಹೇಬ ಜೊಲ್ಲೆ* *ಜೊಲ್ಲೆ ಮನೆತನ ಸಮಾಜದ ಪರವಾಗಿ ಕೆಲಸ ಮಾಡುತ್ತಿದೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಸಂಸ್ಥೆಯು ಇಂದು ಅಂತರರಾಜ್ಯ ಮಟ್ಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಪ್ರಸಕ್ತ ವರ್ಷದಲ್ಲಿ 55 ನೂತನ ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ-ನನದಿ ಸಿಬಿಎಸ್ ಇ ಶಾಲೆಯ ಮೈದಾನದಲ್ಲಿ ಜೊಲ್ಲೆ ಗ್ರುಪ್ ನ ವಿವಿಧ ಸಂಸ್ಥೆಗಳ ವಾರ್ಷಿಕ ಸರ್ವಸಾಧರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸಹಕಾರ ಸಚಿವ ಅಮಿತ ಶಹಾ ಅವರ ನೇತೃತ್ವದಲ್ಲಿ ಸಹಕಾರಿ ಸಂಸ್ಥೆ ಬೆಳವಣಿಗೆ ಕಾಣುತ್ತಿವೆ. ಪ್ರಧಾನಿ ಮೋದಿ ಅವರು ರೈತ ಸಹಕಾರ ಸಂಘ ಆರಂಭ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ.
ಕಳೆದ 36 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಬೀರೇಶ್ವರ ಸಹಕಾರಿ ಶಾಖೆಗಳನ್ನು ಆರಂಭಿಸಿ ಸಹಕಾರಿ ರಂಗದಲ್ಲಿ ಹೊಸ ಅಧ್ಯಾಯ ಬರೆದಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಸಹಕಾರಿ ಸಂಸ್ಥೆಯಲ್ಲಿ ದೊರೆಯುತ್ತವೆ. ಇದರಿಂದ ಗ್ರಾಹಕರ ನೆಚ್ಚಿನ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ.
ಹುಲಜಂತಿಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತದೆ. ಜೊಲ್ಲೆ ಮನೆತನ ಸಮಾಜದ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಲಿ. (ಬಹುರಾಜ್ಯ)36. ನೆಯ ಸರ್ವಸದಸ್ಯರ ಸಭೆ. ಎಣ್ಣೆಬೀಜ ಬೆಳಗಾರರ ಸಹಕಾರಿ ಸಂಘ ನಿ.ಯಕ್ಸಂಬಾದ 33ನೆಯ ವಾರ್ಷಿಕ ಸಭೆ. ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 32 ನೆಯ ವಾರ್ಷಿಕ ಸಭೆ. ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ 31ನೇ ವಾರ್ಷಿಕ ಸಭೆ. ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ 19 ನೆಯ ವಾರ್ಷಿಕ ಸಭೆ.ಲೋಕ ಕಲ್ಯಾಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 15ನೆಯ ವಾರ್ಷಿಕ ಸಭೆ. ಬಸವಜ್ಯೋತಿ ಫಾರ್ಮರ್ ಪ್ರೊಡ್ಯುಸರ್ ಅರ್ಗನೈಜೇಶನ ಕೋ-ಆಪ್. ಸೊಸಾಯಟಿಯ 6 ನೆಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ 4.45 ಲಕ್ಷ ಸದಸ್ಯರನ್ನು ಹೊಂದಿದೆ. 5000 ಕ್ಕೂ ಅಧಿಕ ಕೋಟಿ ಠೇವು ಸಂಗ್ರಹ. 3838 ಕೋಟಿ ಸಾಲ. 51.04 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಾದ್ಯಂತ 233 ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಸಂಸ್ಥೆಯು ಇಷ್ಟೊಂದು ಬೆಳವಣಿಗೆ ಸಾಧಿಸಲು ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿ ಪ್ರೋತ್ಸಾಹ ಮತ್ತು ಸಿಬ್ಬಂದಿಗಳ ನಿರಂತರ ಪರಿಶ್ರಮ ಕಾರಣ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಜೊಲ್ಲೆ ಮನೆತನ ಸಮಾಜ ಕಾರ್ಯ ಮಾಡುತ್ತಾ ಬಂದಿದೆ. ಬೀರೇಶ್ವರ ಸಂಸ್ಥೆಯ ಮೂಲಕ ಸಮಾಜ ಕಾರ್ಯ ಮಾಡಲು ಪ್ರೇರಣೆ ಸಿಕ್ಕಿದೆ. ಸಿಬ್ಬಂದಿಗಳ ಸಹಕಾರ ಸದಸ್ಯರ ಪ್ರೊತ್ಸಹ ಸಂಸ್ಥೆಯು ಕೆಲಸ ಕಾರ್ಯ ಮಾಡುತ್ತದೆ.
ಈ ಸಂದರ್ಭದಲ್ಲಿ ಬೀರೇಶ್ವರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ. ಉಪಾಧ್ಯಕ್ಷ ಆನಂದ ಪಾಟೀಲ, ಜ್ಯೋತಿ ಸಂಸ್ಥೆಯ ಅಧ್ಯಕ್ಷ ಬಾಬುರಾವ ಮಾಳಿ. ಉಪಾಧ್ಯಕ್ಷ ವಿಶ್ವನಾಥ ಪೇಟಕರ. ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಗಲ ಜೊಲ್ಲೆ. ಉಪಾಧ್ಯಕ್ಷ ಆರತಿ ಪೋತದಾರ.ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಕಬಾಡೆ. ಉಪಾಧ್ಯಕ್ಷ ಸದಾಶಿವ ಕೋಕಣೆ. ಮಹೇಶ ಭಾತೆ. ಈಶ್ವರ ಕತ್ತಿ. ರಾಜೇಂದ್ರ ಪಾಟೀಲ.ಚಂದ್ರಶೇಖರ್ ಕವಟಗಿ.
ಮತ್ತು ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಕೆ.ಮಂಗಾವತೆ, ಆರ್.ಜಿ.ಕುಂಬಾರ.ಎಸ್.ಕೆ.ಮಾನೆ.ಶಿವು ಡಬ್ಬನ್ನವರ, ಶೇಖರ ಪಾಟೀಲ.ಸಂತೋಷ ಪಾಟೀಲ. ಎಂ.ಎಂ.ಪಾಟೀಲ ಮುಂತಾದವರು ಇದ್ದರು.
ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.




