Kannada NewsKarnataka NewsNationalPolitics
*ನ್ಯೂಯಾರ್ಕ್ ಮೇಯರ ಆಗಿ ಭಾರತೀಯ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಅಮೇರಿಕಾದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಹಲವು ಜನ ಭಾರತೀಯರು ಸಂಸದರಾಗಿ ಆಯ್ಕೆ ಆಗಿದ್ದರು. ಆದರೆ ಈಗ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಆಯ್ಕೆ ಆಗಿದ್ದಾರೆ.
33 ವರ್ಷದ ಜೋಹ್ರಾನ್ ಮಮ್ಹಾನಿ ಎಂಬುವರು ಗೆಲುವು ಸಾಧಿಸಿದ್ದಾರೆ. ಜೋಹ್ರಾನ್ ಮಮಾನಿ ನ್ಯೂಯಾರ್ಕ್ ನಗರದ ಮೊದಲ ಭಾರತೀಯ- ಅಮೆರಿಕನ್ ಮೇಯರ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಚುನಾವಣೆಯಲ್ಲಿ ಮಾಜಿ ಗವರ್ನರ್ ಆಂದ್ರೂ ಕ್ಯುಮೊ ವಿರುದ್ಧ ಜೋಹ್ರಾನ್ ಮಮ್ಹಾನಿ ಗೆದ್ದು ಬೀಗಿದ್ದಾರೆ. ಇನ್ನು ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಮಹಮೂದ್ ಮಮ್ಹಾನಿ ಅವರ ಪುತ್ರರಾದ ಜೋಹ್ರಾನ್, ಸ್ಟೀನ್ಸ್ ನ ರಾಜ್ಯ ವಿಧಾನಸಭಾ ಸದಸ್ಯರಾಗಿದ್ದಾರೆ.
ಡೆಮಾಕ್ರಟಿಕ್ ಸಮಾಜವಾದಿ ಜೋಹ್ರಾನ್ ಮಮ್ಹಾನಿ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿ ಸದಸ್ಯರಾಗಿದ್ದು, ಅವರು ದಕ್ಷಿಣ ಏಷ್ಯಾದ ಹಾಗೂ ಮೊದಲ ಉಗಾಂಡನ್ ಮತ್ತು ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಗೆ ಆಯ್ಕೆಯಾದ ಮೂರನೇ ಮುಸ್ಲಿಂ ಎಂಬ ಹೆಗ್ಗಳಿಕೆಗೆ ಸಹ ಮತ್ತೆ ಪಾತ್ರರಾಗಿದ್ದಾರೆ.




