Belagavi NewsBelgaum NewsCrimeLatest
*ಸಿಸಿಬಿ ಪೊಲೀಸರ ದಾಳಿ: 3 ಲಕ್ಷ ಮೌಲ್ಯದ ಗಾಂಜಾ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಕತಿ ಎನ್ಎಚ್-48 ರ ಸರ್ವಿಸ ಮಾರ್ಗದಲ್ಲಿರುವ ಚಿಗರಿ ಪ್ರಕೃತಿ ಶಿಬಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುವ ವೇಳೆ ಬೆಳಗಾವಿಯ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಗಾಂಜಾ ವಶಕ್ಕೆ ಪಡೆದಿದ್ದಾರೆ.
ಸೈಯ್ಯದ ನಿಸಾರ ತಂದೆ ಸೈಯ್ಯದ ಇಸಾಕ (40) ಬಂದಿತ ಆರೋಪಿ ಆರೋಪಿ ನಂ.2 ಗಜಾನನ, ಎಂಬಾತನಿಗೆ ಮಾರಾಟ ಮಾಡಲು ಬಂದಾಗ ಸಿಸಿಬಿ ವಿಭಾಗ ಪಿಐ. ಮಂಜುನಾಥ ನಾಯಕ, ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತನಿಂದ 3,05,000 ರೂ. ಮೌಲ್ಯದ 6 ಕೆಜಿ. 145 ಗ್ರಾಂ ನಷ್ಟು ಗಾಂಜಾ, 5000 ರೂ. ಮೌಲ್ಯದ ಮೋಬೈಲ್ ಹೀಗೆ ಒಟ್ಟು ರೂ.3,10,000 ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಕಾಕತಿ ಪೊಲೀಸ್ ಠಾಣೆ ಪ್ರ ಸಂ. 109/2026 ಕಲಂ.20(b),(ii)(B) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.




