Film & EntertainmentNationalPolitics

*ಹೊಸ ರಾಜಕೀಯ ಪಕ್ಷದ ಬಾವುಟ, ಚಿಹ್ನೆ ಬಿಡುಗಡೆ ಮಾಡಿದ ನಟ ದಳಪತಿ ವಿಜಯ್*

ಪ್ರಗತಿವಾಹಿನಿ ಸುದ್ದಿ: ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದು, ತಮ್ಮದೇ ಹೊಸ ಪಕ್ಷದ ಬಾವುಟ ಹಾಗೂ ಚಿಹ್ನೆ ಬಿಡುಗಡೆ ಮಾಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ನಟ ದಳಪತಿ ವಿಜಯ್, ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. 2026ರಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅದರಂತೆ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು.

Home add -Advt

ಇಂದು ವಿಜಯ್, ತಮ್ಮ ರಾಜಕೀಯ ಪಕ್ಷದ ಬಾವುಟ ಹಾಗೂ ಚಿಹ್ನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಮುಲಕ ಚಿತ್ರರಂಗದಿಂದ ದೂರವಿರಲು ನಿರ್ಧರಿಸಿರುವ ವಿಜಯ್, ರಾಜಕೀಯಕ್ಕೆ ಧುಮಕಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.


Related Articles

Back to top button