Kannada NewsKarnataka NewsLatest

*ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸುವುದಾಗಿ ಹೇಳಿ ಶಾಸಕರಿಗೆ ಲಕ್ಷ ಲಕ್ಷ ವಂಚನೆ*

ಪ್ರಗತಿವಾಹಿನಿ ಸುದ್ದಿ: ತಿರುಪತಿಯಲ್ಲಿ ವಿಶೇಷ ದರ್ಶನ ಮಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು ಶಾಸಕರಿಗೇ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ವ್ಯಕ್ತಿಯೋರ್ವ ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸುತ್ತೇನೆ ಎಂದು ಹೇಳಿ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹಾಗೂ ಆಪ್ತ ಮುಖಂಡರಿಗೆ ಬರೋಬ್ಬರಿ 8 ಲಕ್ಷ ರೂಪಾಯಿ ವಂಚಿಸಿ ನಾಪತ್ತೆಯಾಗಿದ್ದಾನೆ.

Home add -Advt

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆಪ್ತ ಸಹಾಯಕನಾಗಿದ್ದ ಮಾರುತಿ ಎಂಬಾತ ಶಾಸಕ ಶ್ರೀನಿವಾಸ್ ಗೆ 8 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯದಿಂದ ಟಿಟಿಡಿಯಲ್ಲಿ ಸದಸ್ಯರಾಗಿರುವ ಎಸ್.ಆರ್.ವಿಶ್ವನಾಥ್, ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೋಗುವವರಿಗೆ ಪಾಸ್ ಕೊಡುವ ನಿಟ್ಟಿನಲ್ಲಿ ಸಹಾಯಕನನ್ನಾಗಿ ಮಾರುತಿ ಎಂಬಾತನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಆತ ಶಾಸಕ ಶ್ರೀನಿವಾಸ್ ಹಾಗೂ ಆಪ್ತ ಮುಖಂಡರಿಗೆ ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸುತ್ತೇನೆ. ಜೊತೆಗೆ ರೂಮ್ ವ್ಯವಸ್ಥೆ ಕೂಡ ಇರಲಿದೆ ಎಂದು ಹೇಳಿ ಆನ್ ಲೈನ್ ಮೂಲಕ ಹಣ ಪಡೆದು ನಾಪತ್ತೆಯಾಗಿದ್ದಾನೆ. ಇತ್ತ ವಿಶೇಷ ದರ್ಶನದ ಪಾಸು ಇಲ್ಲ, ಅತ್ತ ತಿಮ್ಮಪ್ಪನ ದರ್ಶನವೂ ಇಲ್ಲ.

ಇದೀಗ ನೆಲಮಂಗಲ ಟೌನ್ ಠಾಣೆಯಲ್ಲಿ ಮಾರುತಿ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಮಾರುತಿ ವಿರುದ್ಧ ಇನ್ನೂ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Articles

Back to top button