Latest

ಖ್ಯಾತ ಬ್ಯುಲ್ಡರ್ ಹಂತಕರ ಗುಂಡಿಗೆ ಬಲಿ

ಪ್ರಗತಿ ವಾಹಿನಿ ಸುದ್ದಿ ನಾಂದೇಡ್ – 

ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ಬ್ಯುಲ್ಡರ್ ನಾಮದೇಡ್‌ನ ಸಂಜಯ್ ಬಿಯಾನಿ ಅವರನ್ನು ಅಪರಿಚಿತರು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ.

Home add -Advt

ಸಂಜಯ್ ಬಿಯಾನಿ ನಾಮದೇಡ್‌ನಲ್ಲಿರುವ ತಮ್ಮ ಮನೆಯಿಂದ ಹೊರಗೆ ಬರುತ್ತಿದ್ದಂತೆ ಬೈಕ್‌ನಲ್ಲಿ ಬಂದ ಅಪರಿಚಿತ ಹಂತಕರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಿಯಾನಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಾಂದೇಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಯಕ್ತಿಕ ದ್ವೇಷ, ವೃತ್ತಿ ವೈಷಮ್ಯ ಸೇರಿದಂತೆ ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನು ಬಿಯಾನಿ ಮನೆಯ ಮುಂದೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಫುಟೇಜ್ ಅನ್ನು ಪೊಲೀಸರು ಪಡೆದುಕೊಂಡಿದ್ದರು ಹಂತಕರ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಬೆಳಗಾವಿ: 4.41 ಕೋಟಿ ಲೂಟಿ ಮಾಡಿ ಶಾರ್ಜಾಕ್ಕೆ ಹಾರಲು ಹೊರಟಿದ್ದ ಕ್ರಿಮಿನಲ್ ಗೆ ನ್ಯಾಯಾಂಗ ಬಂಧನ; 2.65 ಕೋಟಿ ವಶ

Related Articles

Back to top button