Kannada NewsKarnataka News
*ನೀರಿನಲ್ಲಿ ಮುಳುಗಿ ಮೂವರು ಸಹೋದರರು ದುರಂತ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ನೀರು ಕುಡಿಯಲು ಕೃಷಿ ಹೊಂಡಕ್ಕೆ ಹೋಗಿದ್ದ ಮೂವರು ಸಹೋದರರು ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಅಚೋಲಾ ತಾಂಡದಲ್ಲಿ ನಡೆದಿದೆ.
ಮೃತ ಸಹೋದರರನ್ನು 10 ವರ್ಷದ ಕೃಷ್ಣ ರಾಠೋಡ್, 14 ವರ್ಷದ ಜಯ ರಾಠೋಡ್ ಹಾಗೂ 12 ವರ್ಷದ ಅಮರ್ ಅಂತ ಗುರುತಿಸಲಾಗಿದೆ.
ಮೂವರು ಸಹೋದರರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದರು. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ನೀರು ಕುಡಿಯೋಕೆ ಹೋದಾಗ ಕಾಲು ಜಾರಿ ಹೊಂಡಕ್ಕೆ ಬಿದ್ದು ಜೀವಬಿಟ್ಟಿದ್ದಾರೆ.
ಕೋಳಿ ಪಾರ್ಮ್ ಕೆಲಸಕ್ಕಾಗಿ ಬೃಹತ್ ಗಾತ್ರ ಹೊಂಡ ನಿರ್ಮಾಣ ಮಾಡಲಾಗಿತ್ತು. ಮಳೆಯಾದ ಹಿನ್ನೆಲೆಯಲ್ಲಿ ಮಳೆಯಿಂದ ಹೊಂಡದಲ್ಲಿ ನೀರು ನಿಂತಿತ್ತು. ಈ ವೇಳೆ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.


