Kannada NewsKarnataka NewsLatestNationalPolitics

*ನಿಮ್ಮಿಬ್ಬರ ಜಗಳದಲ್ಲಿ ನನ್ನ ಎಳೆಯಬೇಡಿ;  ಸಚಿವ ಎಂ ಬಿ ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ಸಚಿವ ಶಿವಾನಂದ ಪಾಟೀಲ್ ಹಾಗೂ ಶಾಸಕ ಬಸನಗೌಡ ಯತ್ನಾಳ ಅವರ ರಾಜಕೀಯ ಯುದ್ಧ ಜೋರಾಗಿದೆ. ಯತ್ನಾಳ ಸವಾಲ್ ಸ್ವೀಕರಿಸಿ ಮತ್ತೆ ಚುನಾವಣೆ ಸ್ಪರ್ಧೆಗೆ ಶಿವಾನಂದ ಪಾಟೀಲ್ ಮುಂದಾಗಿದ್ದಾರೆ.‌

ಈ ಬೆಳವಣಿಗೆ ಬಗ್ಗೆ ವಿಜಯಪುರ ಜಿಲ್ಲೆಯ ಮತ್ತೋರ್ವ ಪ್ರಭಾವಿ ರಾಜಕಾರಣಿ ಪ್ರತಿಕ್ರಿಯೆ ನೀಡಿದ್ದು, ಶಿವಾನಂದ ಪಾಟೀಲ್ ಹಾಗೂ ಯತ್ನಾಳ್ ಒಳ್ಳೆಯ ಗೆಳೆಯರು ಈಗ ಏನಾಗಿದೆಯೋ ಗೊತ್ತಿಲ್ಲ ನಿಮ್ಮಿಬ್ಬರ ಜಗಳದಲ್ಲಿ ನನ್ನ ಎಳೆಯಬೇಡಿ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

Home add -Advt

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿವಾನಂದ ಪಾಟೀಲ್ ವಿರುದ್ಧ ಯತ್ನಾಳ್ ಮಾತನಾಡಿದ್ದು ತಪ್ಪು ಅಲ್ಲೇ ಯತ್ನಾಳ್ ಅವರು ಪೈಗಂಬ‌ರ್ ಬಗ್ಗೆ ಮಾತನಾಡಿದ್ದು ತಪ್ಪು, ಅಶ್ಲೀಲ ಪದಗಳನ್ನು ಯತ್ನಾಳ್‌ ಬಳಸಿದ್ದಾರೆ,

ಯತ್ನಾಳ್‌ ಅವರು ಅಭಿವೃದ್ಧಿ ಬಗ್ಗೆ ಸವಾಲು ಹಾಕಲಿ, ತಂದೆ ತಾಯಿ, ಅಡ್ಡ ಹೆಸರ ಬಗ್ಗೆ ಮಾತನಾಡಬಾರದು. ಅಲ್ಲೇ ಎಂ.ಬಿ ಪಾಟೀಲ್ ಪ್ರತಿಭಟನೆಗೆ ಬರಬೇಕಿತ್ತು ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ. ಆದ್ರೆ ನಾನು ಬೆಳಗಾವಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ ಯಾವುದೋ ಉದ್ದೇಶದಿಂದ ಶಿವಾನಂದ ಪಾಟೀಲ್‌ ಮಾತನಾಡಿದ್ದಾರೆ.

ಈ ಬಗ್ಗೆ “ನಾನು ನಮ್ಮ ಹೈಕಮಾಂಡ್ ಗಮನಕ್ಕೆ ತರ್ತೇನೆ. ಮುಸ್ಲಿಂ ಸಮುದಾಯಕ್ಕೆ ನನ್ನ ಬಗ್ಗೆ ಬೇರೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ಪಕ್ಷದ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ಈ ಹಿಂದೆ ಯತ್ನಾಳ್‌ಗೆ ಮಾತಾಡೋಕೆ ಕಲ್ಸಿದ್ದೇ ಇವರು, ಅವ್ರು ನನ್ನ ಹೆಸರು ಪ್ರಸ್ತಾಪ ಮಾಡಿದರು. ಸೋತ ವ್ಯಕ್ತಿ ಅಂತ ಹೇಳಿಕೆ ಕೊಟ್ಟಿದ್ದಕ್ಕೆ ನಾನು ಮಾತಾಡ್ತಿದೀನಿ, ಎಲ್ಲರ ಗಮನಕ್ಕೆ ತರ್ತಿನಿ, ಹೈ ಕಮಾಂಡ್, ಅಧ್ಯಕ್ಷರು, ಸಿಎಂಗೆ ಇವರಿಗೆ ಮುಂದಿನ ದಿನದಲ್ಲಿ ವಿಜಯಪುರದಲ್ಲಿ ಸ್ಪರ್ಧೆ ಮಾಡಬೇಕು ಅಂತ ಇರ್ಬೇಕು, ಅದಕ್ಕೆ ಈ ರೀತಿ ತಪ್ಪು ಸಂದೇಶ ರವಾನೆ ಮಾಡ್ತಿದಾರೆ ಎಂದು ಶಿವಾನಂದ ಪಾಟೀಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related Articles

Back to top button