Kannada NewsKarnataka NewsLatestPolitics

*ರಾಜ್ಯಸಭಾ ಚುನಾವಣೆ: ಶಾಸಕರು ರೆಸಾರ್ಟ್‌ ಗೆ ಶಿಫ್ಟ್*

ಪ್ರಗತಿವಾಹಿನಿ ಸುದ್ದಿ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.

1 ದಿನ ವಾಸ್ತವ್ಯಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ. 1 ದಿನ ವಾಸ್ತವ್ಯ ಮಾಡಿ ಮರುದಿನ ಮತದಾನ ಮಾಡಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡುವ ಬಗ್ಗೆ ಪರೋಕ್ಷ ಮಾಹಿತಿ ನೀಡಿದ್ದಾರೆ.

Home add -Advt

ಒಂದು ದಿನದ ವಾಸ್ತವ್ಯದ ಬಳಿಕ ಶಾಸಕರು ವಿಧಾನಸೌಧಕ್ಕೆ ಬಂದು‌ ಮತದಾನ ಮಾಡಬೇಕು. 26ರಂದು ಮಧ್ಯಾಹ್ನ 3 ಗಂಟೆಗೆ CLP ಸಭೆ ನಡೆಯಲಿದೆ. 26ರಂದು ಮಧ್ಯಾಹ್ನ 12 ಗಂಟೆಗೆ ಶಾಸಕರು ಬರಬೇಕು ಹಿಲ್ಟನ್ ಹೋಟೆಲ್‌ಗೆ ಆಗಮಿಸಬೇಕೆಂದು ಡಿಕೆಶಿ ಪತ್ರದಲ್ಲಿ ತಿಳಿಸಿದ್ದಾರೆ.

ಮಾನ್ಯತಾ ಟೆಕ್‌ಪಾರ್ಕ್ ಆವರಣದಲ್ಲಿರುವ ಹಿಲ್ಟನ್ ಹೋಟೆಲ್‌ ಗೆ ಬರಲು ಸೂಚಿಸಲಾಗಿದ್ದು ಸಚಿವರು, ಸಿಎಂ ರಾಜಕೀಯ ಕಾರ್ಯದರ್ಶಿಗಳು
ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ.

Related Articles

Back to top button