Kannada NewsKarnataka NewsPolitics

*ಹಾಲಿನ ದರ ಇನ್ನೂ ಜಾಸ್ತಿ ಆಗಲಿ ತೊಂದರೆ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ : ಹಾಲಿನ ದರ ಏರಿಕೆ ವಿರುದ್ಧ ಧ್ವನಿ ಎತ್ತುತ್ತಿರುವ ಬಿಜೆಪಿಗರು ರೈತ ವಿರೋಧಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಪ್ರಕಾರ, ಹಾಲಿನ ದರ ಇನ್ನೂ ಜಾಸ್ತಿ ಆಗಲಿ ತೊಂದರೆ ಇಲ್ಲ. ಆದರೆ ಇದನ್ನು ಯಾರು ಬೇಕಾದರೂ ವಿರೋಧಿಸಲಿ ಎಂದು ವಿಪಕ್ಷಗಳ ವಿರುದ್ಧ ಡಿಕೆಶಿ ಗುಡುಗಿದ್ದಾರೆ.

Home add -Advt

ಹಾಲಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2 ರೂಪಾಯಿ ದರ ಅಸ್ಟೇ ಏರಿಕೆಯಾಗಿದ್ದು ಅದು ರೈತರಿಗೆ ತಲುಪುತ್ತದೆ. ರೈತರು ಸಂಕಷ್ಟದಲ್ಲಿದ್ದಾರೆ. ತಮ್ಮ ಹಸುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕೆಎಂಎಫ್ ಅಂದರೆ ರೈತರ ಒಕ್ಕೂಟ. ಅಲ್ಲಿಗೆ ಸಲ್ಲುವ ಹಾಲಿನ ಹಣ ರೈತರಿಗೆ ಸೇರುತ್ತದೆ. ಕೆಎಂಎಫ್ ಉಳಿಬೇಕು. ಹಾಗಾಗಿ ರೈತರು ಉಳಿಬೇಕು ಎಂದಿದ್ದಾರೆ

ಇನ್ನು ಲೋಕಸಭೆಯ ವಿಪಕ್ಷ ನಾಯಕರಾಗಿ ಸಂಸದ ರಾಹುಲ್ ಗಾಂಧಿ ಅವರು ಆಯ್ಕೆ ಆಗಿದ್ದಕ್ಕೆ ಇದೇ ವೇಳೆ ಶುಭ ಹಾರೈಸಿರುವ ಡಿಕೆಶಿ, ರಾಹುಲ್ ಗಾಂಧಿಯನ್ನು ವಿರೋಧ ಪಕ್ಷದ ನಾಯಕರಾಗಲು ವಿಶ್ವಾಸವಿಟ್ಟು ಒತ್ತಾಯಿಸಿದಕ್ಕೆ ಇಂಡಿಯಾ ಒಕ್ಕೂಟ ಪಕ್ಷಗಳ ಎಲ್ಲಾ ನಾಯಕರು ಹಾಗೂ ಕಾಂಗ್ರೆಸ್ನ ಹಿರಿಯರಿಗೂ ಅಭಿನಂದನೆ ತಿಳಿಸಿದ್ದಾರೆ.

Related Articles

Back to top button