Film & EntertainmentKannada NewsKarnataka News
*ಕಾಂತಾರ ಸಿನಿಮಾದ ಮತ್ತೋರ್ವ ಕಲಾವಿದ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ-2 ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಗೆಳೆಯನ ಮದುವೆಗೆ ಆಗಮಿಸಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಕಾಂತಾರಾ ಸಿನಿಮಾದ ಮತ್ತೋರ್ವ ಕಲಾವಿದ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕಾಂತಾರಾ ಚಾಪ್ಟರ್ 1ರ ಕಲಾವಿದ ಕೇರಳ ಮೂಲದ ವಿ.ಕೆ.ವಿಜು ಮೃತ ಕಲಾವಿದ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ಹೋಂ ಸ್ಟೇಯಲ್ಲಿ ವಿ.ಕೆ.ವಿಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೇರಳದ ತ್ರಿಷೂರ್ ಮೂಲದ ವಿ.ಕೆ.ವಿಜಿ ಮಿಮಿಕ್ರಿ ಕಲಾವಿದರಾಗಿದ್ದರು ಎಂದು ತಿಳಿದುಬಂದಿದೆ. ಇದು ಕಾಂತಾರಾ ಸಿನಿಮಾದ ಮೂರನೇ ಕಲಾವಿದನ ಸಾವಾಗಿದೆ. ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.




