Latest

ಬಾಂಬೆ ಫ್ರೆಂಡ್ಸ್ ವಿರುದ್ಧವೇ ತಿರುಗಿಬಿದ್ದ ಹೆಚ್.ವಿಶ್ವನಾಥ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮುಂದಿನ ದಿನಗಳಲ್ಲಿ ಬಾಂಬೆ ಟೀಂ ನ ಯಾರನ್ನೂ ಮಂತ್ರಿ ಮಾಡಬೇಡಿ, ಅಧಿಕಾರ ಸಿಕ್ಕ ಬಳಿಕ ಎಲ್ಲರೂ ತಿರುಗಿ ಬೀಳ್ತಾರೆ ಎಂದು ಎಂ.ಎಲ್.ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಬಾಂಬೆ ಫ್ರೆಂಡ್ಸ್ ವಿರುದ್ಧ ತಿರುಗಿಬಿದ್ದಿದ್ದು, ಬಾಂಬೆ ಟೀಂ ನವರನ್ನು ಮತ್ತೆ ಮಂತ್ರಿ ಮಾಡಬಾರದು. ಬದಲಾವಣೆಗಾಗಿ ಎಲ್ಲರೂ ಸೇರಿ ಬೆಂಬಲ ನೀಡಿದರು. ಆದರೆ ಅಧಿಕಾರ ಸಿಕ್ಕ ಮೇಲೆ ಎಲ್ಲರೂ ಬದಲಾದರು. ಅಂತವರಿಗೆ ಮಂತ್ರಿ ಸ್ಥಾನ ನೀಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.

Home add -Advt

ಮಂತ್ರಿ ಮಾಡದಿದ್ದರೂ ಬಾಂಬೆ ಟೀಂ ಎಲ್ಲಿಗೂ ಹೋಗಲ್ಲ. ಸರ್ಕಾರ ಹೋದರೆ ಹೋಗಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ಎದುರಾದರೂ ಪರವಾಗಿಲ್ಲ, ಮುಂದೆ ಬಾಂಬೆ ಟೀಂನವರಿಗೆ ಮಾತ್ರ ಅಧಿಕಾರ ನೀಡಬಾರದು ಎಂದು ಹೇಳಿದ್ದಾರೆ.
ಸಿಎಂ ಬಿಎಸ್ ವೈ ಭೋಜನಕೂಟ ದಿಢೀರ್ ಮುಂದೂಡಿಕೆ

Related Articles

Back to top button