Film & EntertainmentKannada NewsKarnataka News

*ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ*

ಪ್ರಗತಿವಾಹಿನಿ ಸುದ್ದಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿಯಾಗಿ ಜೈಲಿನಲ್ಲಿ ಇರುವ ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಂಡಿದ್ದು, ಇಂದು ಅರ್ಜಿ ವಿಚಾರಣೆ ನಡೆಯಲಿದೆ.

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ನನ್ನು ಹೈ ಸೆಕ್ಯುರಿಟಿ ಸೆಲ್ ನಲ್ಲಿಯೇ ವಿಡಿಯೋ ಕಾನ್ಸರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ. ಈ ವೇಳೆ ಜಾಮೀನಿಗಾಗಿ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

Home add -Advt

ನಟ ದರ್ಶನ್ ಅವರ ಪ್ರತಿ ಬೇಡಿಕೆಗಳಿಗೆ ಜೈಲು ಅಧಿಕಾರಿಗಳು ನೂರಾರು ಬಾರಿ ಯೋಚನೆ ಮಾಡಿ ಕ್ರಮ ಕೈಗೊಳ್ಳುತ್ತಿದ್ದು, ಈ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ವೆಸ್ಟರ್ನ್ ಟಾಯ್ಲೆಟ್ ಕೇಳಿದ್ದರು, ಬಳಿಕ ಜೈಲು ಸಿಬ್ಬಂದಿ ಬೆಂಗಳೂರು ಜೈಲ್‌ನಿಂದ ಮೆಡಿಕಲ್‌ ದಾಖಲೆ ಪಡೆದು, ಸ್ಥಳೀಯ ವೈದ್ಯರಿಂದ ಪರಿಶೀಲಿಸಿ ಬಳಿಕ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.

ಇದೀಗ ನಟ ಟವಿ ಬೇಡಿಕೆ ಇಟ್ಟಿದ್ದು, ಜೈಲಿನಲ್ಲಿಯೇ ಟಿವಿ ವ್ಯವಸ್ಥೆ ಮಾಡಲಾಗಿದೆ.

Related Articles

Back to top button