Latest

*ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಾರ್ವಜನಿಕ ವಿಚಾರಣಾ ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ವಿಧ್ಯುಚ್ಛಕ್ತಿ ಆಯೋಗ, ಹುಬ್ಬಳ್ಳಿ ಸರಬರಾಜು ಕಂಪನಿ ನಿಯಮಿತದ ಆರ್ಥಿಕ ವರ್ಷದ 2025-26 ರಿಂದ 2027-28ರ ಅವಧಿಯ ವಿಧ್ಯುತ್ ದರ ಪರಿಷ್ಕರಣಾ ಅರ್ಜಿಯ ಸಂಬಂಧ ಗುರುವಾರ ಸಭೆ ಆಯೋಜಿಸಲಾಗಿದೆ.

ಪಿ.ಬಿ.ರಸ್ತೆ, ನವನಗರ ಹುಬ್ಬಳ್ಳಿಯಲ್ಲಿರುವ ಹುಬ್ಬಳ್ಳಿ ವಿಧ್ಯುತ್ ಸರಬರಾಜು ಕಂಪನಿ ನಿಯಮಿತ, ನಿಗಮ ಕಚೇರಿ ನೂತನ ಸಭಾಂಗಣ ಕೊಠಡಿಯಲ್ಲಿ ಸಾರ್ವಜನಿಕ ವಿಚಾರಣೆ ಸಭೆಯನ್ನು ದಿನಾಂಕ:27-02-2025 ರ ಗುರುವಾರ ಮುಂಜಾನೆ 10.30 ಗಂಟೆಗೆ ನಡೆಸಲಾಗುವುದು.

ಆಸಕ್ತರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ಮೌಖಿಕ ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು ಹು.ವಿ.ಸ.ಕಂ.ನಿ. ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button