Belagavi NewsBelgaum NewsKannada NewsKarnataka NewsLatest

*ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ಅಕ್ರಮ ಮದ್ಯ ಸಾಗಾಟ ಜಾಲ ಪತ್ತೆ; 25 ಲಕ್ಷ ಮೌಲ್ಯದ ಮದ್ಯ ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪುಷ್ಪಾ ಸಿನಿಮಾ ಸ್ಟೈಲ್ ನಲ್ಲಿ ಗೋವಾದಿಂದ ಬೆಳಗಾವಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 80 ಲೀಟರ್ ಮದ್ಯವನ್ನು ಬೆಳಗಾವಿ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Home add -Advt

ಖಾನಾಪುರ ತಾಲೂಕಿನ ಕಣಕಂಬಿ ಚೆಕ್ ಪೋಸ್ಟ್ ನಲ್ಲಿ ಕಂಟೈನರ್ ವಾಹನ ತಪಾಸಣೆ ನಡೆಸಿದಾಗ ವಾಹನದಲ್ಲಿ ಕಂಪಾರ್ಟ್ ಮೆಂಟ್ ಮಾಡಿ ಮದ್ಯ ಬಾಕ್ಸ್ ಗಳನ್ನು ಇಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

80 ಲೀಟರ್ ಬ್ಲೆಂಡ್ ವಿಸ್ಕಿ, ಒಂದು ಚೀಲದಲ್ಲಿದ್ದ ರಾಯಲ್ ಸ್ಪ್ಯಾಗ್ ವಿಸ್ಕಿಯ ಕ್ಯಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 25 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ವಾಹನ ಚಾಲಕ 49 ವರ್ಷದ ಸುಬೋಧ ಮಹತೊ ಎಂಬಾತನನ್ನು ಬಂಧಿಸಲಾಗಿದೆ.


Related Articles

Back to top button