Kannada NewsKarnataka NewsLatest

ಮಹಿಳಾ ದಿನ ನಿಮಿತ್ತ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾರತೀಯ ಮೆನೋಪಾಸ್ ಸೊಸೈಟಿಯ ಬೆಳಗಾವಿ ಶಾಖೆ ಮತ್ತು ಬೆಳಗಾವಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿ ವತಿಯಿಂದ ಇಲ್ಲಿನ ಪಟ್ಟೇದ ಫರ್ಟಿಲಿಟಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು.

GenWorks Health ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ತಪಾಸಣೆಗಾಗಿ ಈ ಕಾರ್ಯಕ್ರಮಕ್ಕೆ ತಾಂತ್ರಿಕ ನೆರವು ನೀಡಿತ್ತು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರನ್ನು ಪರೀಕ್ಷಿಸಲಾಯಿತು.

ಇಂಡಿಯನ್ ಮೆನೋಪಾಸ್ ಸೊಸೈಟಿ ಬೆಳಗಾವಿ ಶಾಖೆಯ ಅಧ್ಯಕ್ಷೆ ಡಾ ವನಿತಾ ಮೆಟಗುಡ್, ಇಂಡಿಯನ್ ಮೆನೋಪಾಸ್ ಸೊಸೈಟಿ ಬೆಳಗಾವಿ ಶಾಖೆಯ ಗೌರವ ಕಾರ್ಯದರ್ಶಿ ಡಾ.ಶೋಭನಾ ಪಟ್ಟೇದ. ಡಾ.ಸತೀಶ್ ಧಮಾಂಕರ್, ಡಾ.ಸೌಭಾಗ್ಯ ಭಟ್, ಡಾ.ಸುಮಯ್ಯ ಫಿರ್ದೌಸ್
ಡಾ. ಅಂಜಲಿ ಜೋಶಿ ಮತ್ತಿತರರು ಉಪಸ್ಥಿತರಿದ್ದರು.

https://pragati.taskdun.com/r-dhruvanarayanadeathcongress/
https://pragati.taskdun.com/magadid-k-shivakumarprajadhwani/
https://pragati.taskdun.com/nh-548-b-highway-sanctionanna-saheba-jollebelagavi/

 

Home add -Advt

Related Articles

Back to top button