ಪ್ರಗತಿವಾಹಿನಿ ಸುದ್ದಿ, ಚಿಂಚಲಿಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾಧ್ಯ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾದೇವಿ. ಭಾರತ ಹುಣ್ಣಿಮೆ ನಂತರ ಬರುವ ಹಸ್ತಾ ನಕ್ಷತ್ರದ ಶುಭಗಳಿಗೆಯಲ್ಲಿ ಜರಗುವ ಜಾತ್ರೆ ಇದಾಗಿದ್ದು ಉತ್ತರ ಕರ್ನಾಟಕದಲ್ಲಿಯೇ ದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿದೆ.
ಫೇ.19 ರಿಂದ ಫೇ. 26ರ ವರೆಗೆ ಜಾತ್ರೆ ಜರುಗಲಿದ್ದು ಜಾತ್ರೆಗೆ ಸುಮಾರು 3 ಲಕ್ಷಕ್ಕಿಂತ ಹೆಚ್ಚು ಭಕ್ತರು ನೆರೆಯ ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂದ್ರಪ್ರದೇಶದ, ದೆಹಲಿ ಹೀಗೆ ಇತರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಫೇ.23 ರಂದು ಮಹಾ ನೈವ್ಯದ್ಯ ಇದ್ದು ಈ ದೇವಿಗೆ ಮಹಾಕಾರತಿ, ಮಹಾಕಾಳಿ, ಮಾಯವ್ವಾ ಎಂಬೆಲ್ಲ ಹೆಸರಿನಿಂದ ಪೂಜಿಸಲ್ಪಡುವ ಮಾಯಕ್ಕಾ ದೇವಿಯ ಜಾತ್ರೆಗೆ ಚಿಂಚಲಿ ಗ್ರಾಮ ಸಜ್ಜಾಗಿದೆ.ಪೌರಾಣಿಕ ಹಿನ್ನೆಲೆ:ದೇವಿಯು ಮಹಾರಾಷ್ಟ್ರದ ಮಾನದೇಶ (ಕೊಂಕಣ) ದಿಂದ ಬಂದವಳು ಎಂದು ಹೇಳುತ್ತಾರೆ. ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ ಅಲ್ಲಿಯೇ ನೆಲೆಯೂರಿದ್ದಾಳೆಂದು ಐತಿಹಾಸಿಕ ಕಥೆಗಳು ಹೇಳುತ್ತವೆ. ಭಕ್ತರು ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುತ್ತಾರೆ .ಹಿರಿಯರ ಪ್ರಕಾರ ಚಿಂಚಲಿಯಲ್ಲಿ ಹಿರಿದೇವಿ ಮೂಲ ದೇವತೆ. ಇವಳೇ ಗ್ರಾಮ ದೇವತೆ. ಮಾಯಕ್ಕಾದೇವಿ ಹಿರಿದೇವಿಯ ಆಶ್ರಯ ಪಡೆದು ಚಿಂಚಲಿಯಲ್ಲಿ ನೆಲೆಸಿದಳು. ಅದಕ್ಕಾಗಿ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ಸಲ್ಲುತ್ತದೆ. ಈಗಲೂ ಮೊದಲು ಹಿರಿದೇವಿ ದರ್ಶನ ಮಾಡಿ ನೈವೇದ್ಯ ಸಲ್ಲಿಸಿ ನಂತರ ಮಾಯಕ್ಕಾದೇವಿಗೆ ನೈವೇದ್ಯ ಸಲ್ಲಿಸುತ್ತಾರೆ ಭಕ್ತರು.ದೇವಿಯ ಪವಾಡ:ಒಂದು ದಿನ ದೇವಿಯು ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋದಾಗ ಅಲ್ಲಿ ಒಬ್ಬ ಕುರಿಕಾಯುವನ ಹತ್ತಿರ ಹೋಗಿ ಕುಡಿಯಲು ಕುರಿಯ ಹಾಲು ಕೇಳಿದಳು. ಅದಕ್ಕೆ ಕುರಿಕಾಯುವವನು ಕೊಡುವುದಿಲ್ಲ ಎಂದು ನಿರಾಕರಿಸಿದನಂತೆ. ಆಗ ಮಾಯಕ್ಕಾ ದೇವಿ ತನ್ನ ಶಕ್ತಿಯಿಂದ ಹಳ್ಳವನೆಲ್ಲ ಹಾಲಾಗಿ ಹರಿಯುವಂತೆ ಮಾಡಿದಳಂತೆ. ಇಂದಿಗೂ ಆ ಹಳ್ಳಕ್ಕೆ ‘ಹಾಲು ಹಳ್ಳ’ ಎಂಬ ಹೆಸರಿನಿಂದ ಕರೆಯುತ್ತಾರೆ. ಅದರ ಪಕ್ಕದಲ್ಲಿ ಕುರಿ ಕಾಯುತ್ತಿದ್ದವರಲ್ಲಿ ಕುರಿಯ ಉಣ್ಣೆ ಕೇಳಿದಕ್ಕೆ ಅವರು ನಿರಾಕರಿಸಿದ್ದರಿಂದ ಕೋಪದಿಂದ ದೇವಿ ನೀಡಿದ ಶಾಪದಿಂದ ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ. ಇಂದಿಗೂ ಹಾಲು ಹಳ್ಳದ ದಡದಲ್ಲಿ ಗುಂಪು ಗುಂಪಾಗಿ ಬಿದ್ದ ಕಲ್ಲುಗಳನ್ನು ಉಣ್ಣೆ ಮುತ್ತಪ್ಪನ ಕಲ್ಲುಳಿ ಎಂಬ ಹೆಸರಿನಿಂದ ಕರೆಯುತ್ತಾರೆ.ದೇವಿಯ ಅಲಂಕಾರ:ತೆಲೆಯ ಮೇಲೆ ಕಿರೀಟ, ಅದರ ಮೇಲೆ ಐದು ಹೆಡೆಯ ಸರ್ಪ, ನಾಲ್ಕು ಕೈಗಳ ತುಂಬಾ ಹಸಿರು ಬಳೆಗಳು, ಮೈತುಂಬಾ ಬಂಗಾರದ ಒಡವೆಗಳು, ಬಲಗೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ತ್ರಿಶೂಲಹಾಗೂ ಎಡಗೈಯಲ್ಲಿ ಹಾವು ಕಂಡು ಬರುತ್ತದೆ. ದೇವಿಯನ್ನು ಶಕ್ತಿ ದೇವಿ ಹಾಗೂ ಪಾರ್ವತಿ ಅವತಾರ ಎನ್ನುತ್ತಾರೆ ಇಲ್ಲಿನ ಹಿರಿಯರು.ದೇವಸ್ಥಾನದ ಮುಖ ಪೂರ್ವಕ್ಕೆ ಇದ್ದು 50 ಅಡಿ ಎತ್ತರದ ಮಹಾದ್ವಾರ ಇದೆ. ದೇವಿಯ ಮುಖ್ಯ ವಾಹನ ಕುದುರೆ. ದೇವಿಯ ವಿಗ್ರಹಗಳು, ಪಲ್ಲಕ್ಕಿ, ಉತ್ಸವ ಮೂರ್ತಿ ಎಲ್ಲವೂ ಅಶ್ವಾರೂಢವಾಗಿರುವುದು ವಿಶೇಷ. ಭಕ್ತರು ಮಾಯಕ್ಕನ ಕುದುರೆ ಮುಖಕ್ಕೆ ಭಂಡಾರ ಲೇಪಿಸಿ ನಂತರ ಹಣೆಗೆ ಲೇಪಿಸುವುದು ರೂಢಿ.21 ಶತಮಾನದಲ್ಲೂ ಕೂಡಾ ಅಪಾರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಅಪಾರ ಭಕ್ತರು ಎತ್ತಿನ ಗಾಡಿಯ ಮೂಲಕ ಹಾಡುತ್ತಾ ಕುಣಿಯತ್ತಾ ದೇವಿಯ ದರ್ಶನ ಪಡೆಯಲು ಬರುತ್ತಾರೆ ಭಕ್ತರು. ಹಿರಿಯರು ರೂಢಿಸಿರುವ ವಾಡಿಕೆಯಂತೆ ತೆಲೆಮಾರುಗಳಿಂದ ಬಂದಿರುವಂತ ಆಚರಣೆ ಭಕ್ತಿಯನ್ನು ಬಿಡದೆ ಪ್ರತಿ ವರ್ಷ ಭಾರತ ಹುಣಿಮೆ ನಂತರ ಬರುವ ಹಸ್ತಾ ಶುಭ ಗಳಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ ಗಡಿಭಾಗದ ಭಕ್ತರು..Read Next
7 hours ago
*ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಅಳವಡಿಸಿಕೊಳ್ಳಬೇಕು; ರವಿ ಕೋಟಾರಗಸ್ತಿ*
7 hours ago
*ಮೀಟರ್ ಆಧಾರಿತ ಆಟೋ ಸಂಚಾರ ಕಡ್ಡಾಯ: ಡಿಸಿ ಮೊಹಮ್ಮದ್ ರೋಷನ್*
7 hours ago
*ತೋಟದಲ್ಲಿ ಮರ ಬಿದ್ದು ಇಬ್ಬರು ಮಹಿಳಾ ಕಾರ್ಮಿಕರು ಸಾವು*
9 hours ago
*ಸಂಪುಟ ವಿಸ್ತರಣೆಗೆ ಲೋಕ ಭವನದಲ್ಲಿ ಸಿದ್ಧತೆ ಆರಂಭ*
10 hours ago
*ನಮಗೇ ನೀರಿಲ್ಲ, ತಮಿಳುನಾಡಿಗೆ ಬಿಡುವುದು ಹೇಗೆ ಸಾಧ್ಯ? ಕುಮಾರಸ್ವಾಮಿ ಪ್ರಶ್ನೆ*
10 hours ago
*ಡಾ.ಸರಜೂ ಕಾಟ್ಕರ್ ಅವರಿಗೆ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’*
11 hours ago
*ಊದುವುದನ್ನು ಕೊಟ್ಟು ಬಾರಿಸುವುದನ್ನು ತಂದಂತಿದೆ: ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಪ್ರಲ್ಹಾದ್ ಜೋಶಿಯನ್ನು ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ಸರಿಯಲ್ಲ: ಸಿದ್ದರಾಮಯ್ಯ ವಾಗ್ದಾಳಿ*
12 hours ago
*ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ CWMAಗೆ ಮೇಲ್ಮನವಿಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್*
13 hours ago
*ಕಾವೇರಿ ನದಿ ನೀರು ವಿವಾದ: ಜು.31ಕ್ಕೆ ಬೃಹತ್ ಹೋರಾಟಕ್ಕೆ ಕರೆ ಕೊಟ್ಟ ಬಿ.ವೈ.ವಿಜಯೇಂದ್ರ*
13 hours ago
*ಮಲ್ಲಿಕಾರ್ಜುನ ಖರ್ಗೆಗೆ ವಾರಂಟ್ ಜಾರಿ ಮಾಡಿದ ಕೋರ್ಟ್*
Related Articles
Check Also
Close




