Latest

ಮೆಟ್ಟಿಲುಗಳ ಮೇಲೆ ಕುಸಿದುಬಿದ್ದ ಗಾಯಕ ಸಾವು

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಕೆಕೆ ಎಂದೇ ಜನಪ್ರೀಯತೆ ಪಡೆದುಕೊಂಡಿದ್ದ ಗಾಯಗ ಕೃಷ್ಣಕುಮಾರ್ ಕುನ್ನತ್ (53) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಸಂಗೀತ ಕಾರ್ಯಕ್ರಮ ನೀಡಿದ ಬಳಿಕ ಹೋಟೆಲ್ ಗೆ ವಾಪಸ್ ಆದ ಗಾಯಕ ಮೆಟ್ಟಿಲುಗಳ ಮೇಲೆ ಕುಸಿದು ಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.

Home add -Advt

ಗಾಯಕ ಕೆಕೆ ಸಾವಿನ ಬಗ್ಗೆ ಸಚಿವ ಅನುಪ್ ಬಿಸ್ವಾನ್ ಮಾಹಿತಿ ನೀಡಿದ್ದು, ಕೆಕೆ ಅವರನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಗಾಯಕ ಕೃಷ್ಣಕುಮಾರ್, ಪಾಲ್, ಯಾರೋನ್ ಹಾಡುಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ಹಿಂದಿ, ತಮಿಳು, ತೆಲಗು, ಕನ್ನಡ, ಮಲಯಾಳಂ, ಮರಾಠಿ ಹಾಗೂ ಬೆಂಗಾಲಿ ಹಾಡುಗಳಿಗೆ ಧ್ವನಿಯಾಗಿದ್ದರು. ಕೆಕೆ ಸಾವಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು, ಅವರ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇಂದಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

Related Articles

Back to top button