ಕ್ಲಬ್ ಹೌಸ್ ನಲ್ಲಿ ನಡೆದಿದ್ದೇನು? ಮೂವರನ್ನು ಬಂಧಿಸಿದ್ದೇಕೆ?

 ಪ್ರಗತಿವಾಹಿನಿ ಸುದ್ದಿ, ಮುಂಬೈ – ಕ್ಲಬ್ ಹೌಸ್‌ನಲ್ಲಿ ಮಹಿಳೆಯರ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ ಹರಿಯಾಣ ಮೂಲದ ಮೂವರನ್ನು ಗುರುವಾರ ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಆಕಾಶ್, ಜೆಷ್ಣವ್ ಮತ್ತು ಪರಾಶರ್ ಎಂಬುವವರು ಬಂಧಿತರು. ಕ್ಲಬ್ ಹೌಸ್ ಒಂದರಲ್ಲಿ ಮಾತನಾಡುತ್ತ ಮಹಿಳೆಯರ ಕುರಿತು ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ಇವರು ನೀಡಿದ್ದರು.

ಈ ಕುರಿತು ಮುಂಬೈ ಮೂಲದ ಸಂಘಟನೆಯೊಂದು   ಮುಂಬೈ ಸೈಬರ್ ಕ್ರೈಂ ಪೋಲಿಸರಿಗೆ ದೂರು ನೀಡಿತ್ತು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮುಂಬೈಗೆ ಕರೆತರಲಾಗುತ್ತಿದ್ದು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ವಿವಾಧಾತ್ಮಕ ಚರ್ಚೆ ಮಾಡಿದ ಕ್ಲಬ್ ಹೌಸ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಸಹ ಪೊಲೀಸರು ನೀಡಿದ್ದಾರೆ.

ಕ್ಲಬ್ ಹೌಸ್ ನಲ್ಲಿ ಸೆಕ್ಸ್ !

Related Articles

Back to top button