Latest

ಸಾಕು ತಂದೆ-ತಾಯಿಯಿಂದಲೇ ಮಗಳಿಗೆ ವಂಚನೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಗಳೊಬ್ಬಳು ಸಾಕು ತಂದೆ-ತಾಯಿಯಿಂದಲೇ ಮೋಸ ಹೋಗಿರುವ ಘಟನೆ ಬೆಂಗಳೂರಿನ ಜಿಗಣಿ ಬಳಿ ನಡೆದಿದೆ.

ಸಾಕು ತಂದೆ-ತಾಯಿ ತನ್ನಿಂದ30 ಲಕ್ಷ ರೂಪಾಯಿ ಹಣ ಪಡೆದು ವಾಪಸ್ ನಿಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ವತ: ಮಗಳು ಲಾವಣ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Home add -Advt

ತಂದೆ-ತಾಯಿಗಳಾದ ಮುನಿರೆಡ್ಡಿ ಹಾಗೂ ನಿರ್ಮಲಾ ಎಂಬುವವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ತಾನು ಬೆಸ್ಕಾಂ ನಲ್ಲಿ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಾಕು ತಂದೆ ತಾಯಿಯಾದ ಮುನಿರೆಡ್ಡಿ ಹಾಗೂ ನಿರ್ಮಲಾ ಚೀಟಿ ವ್ಯವಹಾರ ನಡೆಸುತ್ತಿದ್ದರು. ಚೀಟಿ ವ್ಯವಹಾರದಲ್ಲಿ ನಷ್ಟವಾಗಿದೆ ಎಂದು ಹೇಳಿ ನನ್ನಿಂದ ಹಣ ಪಡೆದುಕೊಂಡಿದ್ದರು. ವಾಪಸ್ ಕೇಳಿದ್ದಕ್ಕಾಗಿ ಜಗಳ ಮಾಡಿ ತನ್ನನ್ನು ಬೀದಿಗೆ ತಳ್ಳಿದ್ದಾರೆ. ಇದರಿಂದ ಬೇಸತ್ತ ಲಾವಣ್ಯ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಚೇತರಿಸಿಕೊಂಡಿರುವ ಲಾವಣ್ಯ ಇದೀಗ ಸಾಕು ತಂದೆ-ತಾಯಿ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾಳೆ.

ಪಾಲಿಕೆ ಮೈತ್ರಿ ವಿಚಾರ; ನಾಳೆ ನಿರ್ಧಾರ

Related Articles

Back to top button