ರಾಜಧಾನಿ ಪೊಲೀಸರಲ್ಲೂ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೇಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಯಥೇಚ್ಚವಾಗಿ ಹೆಚ್ಚಾಗುತ್ತಿದೆ. ಇದೀಗ ಪೊಲೀಸರಿಗೂ ಕೊರೊನಾ ಸೋಂಕು ಹರಡುತ್ತಿದ್ದು, ಬೆಂಗಳೂರಿನ 7 ಠಾಣೆಯ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆ, ಜೆಜೆ ನಗರ ಪೊಲೀಸ್ ಠಾಣೆ, ಜೆಬಿ ನಗರ ಪೊಲೀಸ್ ಠಾಣೆ, ಡಿಜಿ ಅಂಡ್ ಐಜಿಪಿ ಕಚೇರಿ, ಫ್ರೇಜರ್ ಟೌನ್ ಪೊಲೀಸ್ ಠಾಣೆ, ಚಾಮರಾಜ ಪೇಟೆ ಸಿಎಆರ್ ಪೊಲೀಸ್ ಪೇದೆಗಳಿಗೆ ಪಾಸಿಟಿವ್ ಬಂದಿದೆ.

Home add -Advt

ಹೆಣ್ಣೂರು ಪೊಲೀಸ್ ಠಾಣೆಯ ಕೋರ್ಟ್ ಬೀಟ್ ಪೊಲೀಸ್, ಶಂಕರ್ ಪುರಂ ಪೊಲೀಸ್ ಪೇದೆಗೂ ಕೊರೊನಾ ಪಾಸಿಟಿವ್ ಬಂದಿರುವುದು ಪೊಲೀಸ್ ವಲಯದಲ್ಲಿ ಆತಂಕ ಹೆಚ್ಚಿಸಿದೆ. ಬಹುತೇಕ ಎಲ್ಲ ಪೊಲೀಸ್ ಠಾಣೆಗಳನ್ನು ಕೂಡ ಸ್ಯಾನಿಟೈಜೇಶನ್ ಮಾಡಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.

Related Articles

Back to top button