Kannada NewsKarnataka NewsLatestPolitics

*ಪ್ರಧಾನಿ ಮೋದಿ ಕರೆಗೆ ಓಗೊಟ್ಟು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ: ಇಂಧನ ಮಿತವ್ಯಯ ಹಾಗೂ ಬಸ್, ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕರೆಗೆ ಓಗೊಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದರು.

ಇಂಧನ ಮಿತ ವ್ಯಯದ ಬಗ್ಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೆಟ್ರೋವನ್ನೇ ಹೆಚ್ಚಾಗಿ ಬಳಸಲು ತೀರ್ಮಾನಿಸಿದ್ದಾಗಿ ವಿಜಯೇಂದ್ರ ಇದೇ ವೇಳೆ ತಿಳಿಸಿದ್ದಾರೆ.

Home add -Advt

ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕುಂಬಳಗೋಡಿನ ಗಾರ್ಡನ್ ಏಷ್ಯಾ ರೆಸಾರ್ಟ್‌ನಲ್ಲಿ ನಡೆಯಲಿರುವ ಬಿಜೆಪಿಯ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಭಾಗವಹಿಸಲು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕುಂಬಳಗೋಡಿಗೆ ಮೆಟ್ರೋ ರೈಲಿನ ಮೂಲಕವೇ ವಿಜಯೇಂದ್ರ ಪ್ರಯಾಣಿಸಿದ್ದಾರೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ವಿಜಯೇಂದ್ರ ಎಲ್ಲಾ ಅಪ್ರಯಾಣಿಕರಂತೆ ಸರತಿ ಸಾಲಿನಲ್ಲಿ ನಿಂತು ಮೆಟ್ರೋ ಟಿಕೆಟ್ ಪಡೆದರು. ಬಳಿಕ ಮೆಜೆಸ್ಟಿಕ್ ನಿಂದ ಕುಂಬಳಗೋಡಿಗೆ ಮೆಟ್ರೋದಲ್ಲಿ ಸಂಚರಿಸಿದರು.

Related Articles

Back to top button