Latest

ವಿವಾಹಿತ ಮಹಿಳೆ ಮೇಲೆ ಆಸಿಡ್ ದಾಳಿ; ಬೆಂಗಳೂರಿನಲ್ಲಿ ಮತ್ತೊಂದು ಅಮಾನುಷ ಘಟನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ದಾಳಿ ಪ್ರಕರಣ ನಡೆದಿದ್ದು, ಮಹಿಳೆಯ ಮೇಲೆ ವ್ಯಕ್ತಿಯೋರ್ವ ಆಸಿಡ್ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಸಾರಕ್ಕಿಯಲ್ಲಿ ನಡೆದಿದೆ.

ಇತ್ತೀಚೆಗೆ ಬೆಂಗಳೂರಿನ ಸುಂಕದಕಟ್ಟೆ ಬಳಿ ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿದ್ದು, ಪರಿಚಿತ ವ್ಯಕ್ತಿಯೇ ಮಹಿಳೆಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ.

Home add -Advt

ಆರೋಪಿ ಅಹ್ಮದ್ ಎಂಬಾತ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ಅಹ್ಮದ್ ತನ್ನನ್ನೇ ವಿವಾಹವಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಮಹಿಳೆ ಒಪ್ಪದಿದ್ದಾಗ ಆಸಿಡ್ ದಾಳಿ ನಡೆಸಿದ್ದಾನೆ

ಘಟನಾಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಊಟದಲ್ಲಿ ವಿಷ ಬೆರಸಿ ಪತ್ನಿ ಮಕ್ಕಳಿಗೆ ಕೊಟ್ಟ ವ್ಯಕ್ತಿ; ಮಗು ದುರ್ಮರಣ
ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸುವಂತೆ ಬಿಜೆಪಿ ದೂರು

Related Articles

Back to top button