Belagavi NewsBelgaum NewsKarnataka NewsLatestPolitics

*ಗೌತಮ್ ಪಾಟೀಲ್ ಜೊತೆ ಸರಳವಾಗಿ ನೆರವೇರಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ*

ಪ್ರಗತಿವಾಹಿನಿ ಸುದ್ದಿ: ಲೋಕಸಭೆಯ ಅತ್ಯಂತ ಕಿರಿಯ ಸಂಸದೆಯರಲ್ಲಿ ಒಬ್ಬರಾದ ಚಿಕ್ಕೋಡಿ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿಶ್ಚಿತಾರ್ಥ ಗೌತಮ್ ಪಾಟೀಲ್ ಅವರೊಂದಿಗೆ ನೆರವೇರಿತು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿಯಾಗಿರುವ ಪ್ರಿಯಾಂಕಾ ಅವರು ರಾಯಚೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಗೌತಮ್ ಪಾಟೀಲ್ ಅವರೊಂದಿಗೆ ವಿವಾಹವಾಗಲಿದ್ದಾರೆ.

ಗೋಕಾಕ್‌ನ ಕ್ಲಬ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ‘ಹಿಲ್ ಗಾರ್ಡನ್’ ನಿವಾಸದಲ್ಲಿ ಸರಳವಾಗಿ ಮಗಳು ಪ್ರಿಯಾಂಕ ಜಾರಕಿಹೊಳಿ ಹಾಗೂ ಗೌತಮ್ ಪಾಟೀಲ್ ನಿಶ್ಚಿತಾರ್ಥ ನೆರವೇರಿಸಲಾಯಿತು.

ಕೇವಲ ಕುಟುಂಬದ ಆಪ್ತರು ಹಾಗೂ ನಿಕಟವರ್ತಿಗಳ ಸಮ್ಮುಖದಲ್ಲಿ ಜೋಡಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥದ ವಿಧಿವಿಧಾನಗಳು ನಡೆದವು.

ಗೌತಮ್ ಪಾಟೀಲ್ ವೃತ್ತಿಯಲ್ಲಿ ಸಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರಾಯಚೂರು ಜಿಲ್ಲೆಯ ದೇವದುರ್ಗ ಮೂಲದವರಾಗಿದ್ದು, ಇವರ ತಂದೆ ನಿವೃತ್ತ ಆರ್‌ಟಿಒ ಅಧಿಕಾರಿಯಾಗಿದ್ದಾರೆ. ಸದ್ಯ ಗೌತಮ್ ಅವರ ಕುಟುಂಬದ ಹೆಚ್ಚಿನ ವಿವರಗಳನ್ನು ಜಾರಕಿಹೊಳಿ ಕುಟುಂಬ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ.


Related Articles

Back to top button