National

*ಟ್ರಕ್ ಗೆ ಗುದ್ದಿದ ಕಾರು: 6 ಜನ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ವೇಗವಾಗಿ ಬಂದ ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಪಘಾತಕ್ಕೀಡಾದ ಕಾರು ಸಂಪೂರ್ಣ ಜಖಂಗೊಂಡಿದ್ದು ಗುರುತೇ ಸಿಗದಂತಾಗಿದೆ. ಇಲ್ಲಿನ ಅಬು ರಸ್ತೆಯ ಕಿವ್ರಾಲಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅಪಘಾತ ಉಂಟಾಗಿದೆ ಎಂದು ಮೌಂಟ್ ಅಬು, ಗೋಮಾರಂನ ಸರ್ಕಲ್ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Home add -Advt

ಮೃತರನ್ನು ನಾರಾಯಣ ಪ್ರಜಾಪತ್, ಅವರ ಪತ್ನಿ ಪೋಷಿ ದೇವಿ, ಮಗ ದುಶ್ಯಂತ್, ಚಾಲಕ ಕಲುರಾಮ್ ಎಂದು ಗುರುತಿಸಲಾಗಿದ್ದು, ಮತ್ತಿಬ್ಬರ ಗುರುತು ಪತ್ತೆಯಾಗಬೇಕುದೆ. ಮೃತರೆಲ್ಲರೂ ಅಹಮದಾಬಾದ್ ನಿವಾಸಿಗಳು ಎಂಬ ಮಾಹಿತಿ ತಿಳಿದುಬಂದಿದೆ.

Related Articles

Back to top button