Latest

ಮತ್ತೆ ಕ್ಷಿಪ್ರ ರಾಜಕೀಯ ಬೆಳವಣಿಗೆ: ಮಂಗಳವಾರ ಬಿಜೆಪಿ ಶಾಸಕಾಂಗ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮತ್ತೆ ಆಪರೇಶನ್ ಕಮಲ ಪ್ರಯತ್ನ ನಡೆಯುತ್ತಿದೆ, ಈ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಸರಕಾರ ಪತನವಾಗಬಹುದು  ಎನ್ನುವ ವದಂತಿಯ ಮಧ್ಯೆಯೇ ಬಿಜೆಪಿ ಮಂಗಳವಾರ ತುರ್ತು ಶಾಸಕಾಂಗ ಸಭೆ ಕರೆದಿದೆ. 

Home add -Advt

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಶಾಸಕಾಂಗ ಸಭೆಯ ನಂತರ ಕೋರ್ ಕಮಿಟಿ ಸಭೆಯೂ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ ಲಾಲ್ ಅವರು ಮಂಗಳವಾರ ಸಂಜೆ 6 ಗಂಟೆಗೆ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.

ಈ ಮಧ್ಯೆ ಪಕ್ಷದ ಕೆಲವು ರಾಷ್ಟ್ರೀಯ ಮುಖಂಡರೂ ರಾಜ್ಯಕ್ಕೆ ಆಗಮಿಸಿದ್ದಾರೆ ಎನ್ನುವ ವದಂತಿ ಸಹ ಹರಡಿದೆ. ಅಲ್ಲದೆ ಯಡಿಯೂರಪ್ಪ ತಮ್ಮ ಮೈಸೂರು ಪ್ರವಾಸ ರದ್ದು ಮಾಡಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.

ಈ ಮಧ್ಯೆ, ಬಿಜೆಪಿ ಕಾಂಗ್ರೆ ಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎನ್ನುವ ವದಂತಿಯ ಬೆನ್ನಿಗೇ ಕಾಂಗ್ರೆಸ್-ಜೆಡಿಎಸ್ ಕೂಡ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರಕಾರ ಉರುಳಿಸಲು ಪ್ರಯತ್ನಿಸಿದರೆ, ಬಿಜೆಪಿಯ ಕೆಲವು ಶಾಸಕರೇ ನಮ್ಮ ಸರಕಾರವನ್ನು ಉಳಿಸಲಿದ್ದಾರೆ  ಎನ್ನುವ ಬಾಂಬ್ ಸಿಡಿಸಿದ್ದಾರೆ. 
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಮತ್ತೆ ಎಲ್ಲ ಪಕ್ಷಗಳೂ ರೆಸಾರ್ಟ್ ರಾಜಕಾರಣ ಮಾಡುವ ಸಾಧ್ಯತೆ ಕಂಡುಬರುತ್ತಿದೆ. 

Related Articles

Back to top button