Karnataka NewsLatest
ಮಧ್ಯರಾತ್ರಿ ಬಂದವನ ಬಡಿದು ಕೊಂದಳು

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ಗ್ರಾಮ ಪಂಚಾಯತ ಸದಸ್ಯನನ್ನು ಕೊಲೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಸರಖೋಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಸರಖೋಡ ಗ್ರಾಮದ ಬಸವರಾಜ ದೊಡಮನಿ ಕೊಲೆಯಾದಾತ. ಈತ ದೇಗಾಂವ ಗ್ರಾಮ ಪಂಚಾಯತಿ ಸದಸ್ಯ.
ಮಧ್ಯ ರಾತ್ರಿ ಮಹಿಳೆಯ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದ ವೇಳೆ ಆಕೆ ಕಣ್ಣಿಗೆ ಖಾರದ ಪುಡಿ ಎರಚಿ ಬಡಿದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಬಸವರಾಜ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಬಸವರಾಜ ಬಿಜೆಪಿ ಎಸ್ ಎಸಿ ಮೋರ್ಚಾ ಉಪಾಧ್ಯಕ್ಷನೂ ಆಗಿದ್ದ. ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹಿಳೆ ಜೊತೆಗೆ ಆತನಿಗೆ ಅಕ್ರಮ ಸಂಬಂಧ ಇದ್ದಿರಬಹುದು ಎಂದು ಶಂಕಿಸಲಾಗಿದೆ.




