Latest

*ಕಲ್ಯಾಣ ರಾಜ್ಯ ಪ್ರಗತಿ ಪಕ್ಷ; 5 ಕ್ಷೇತ್ರಗಳ ಅಭ್ಯರ್ಥಿ ಘೋಷಿಸಿದ ಜನಾರ್ಧನ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ವಿಧಾನಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಹುರಿಯಾಳುಗಳನ್ನು ಕಣಕ್ಕಿಳಿಸುತ್ತಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ನೂತನ ಪಕ್ಷ ಸ್ಥಾಪಿಸಿ ಎರಡನೇ ಬಾರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ತಮ್ಮ ಪಕ್ಷದ ಕೆಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ಗೆಲ್ಲಬಹುದಾದ 5 ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಪ್ರಕಟಿಸಿದ್ದಾಗಿ ತಿಳಿಸಿದ್ದಾರೆ.
* ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕ್ಷೇತ್ರ – ಧರೆಪ್ಪ ನಾಯಕ್
* ಕನಕಗಿರಿ ಕ್ಷೇತ್ರ – ಡಾ.ಚಾರುಲ್ ದಾಸರಿ
* ನಾಗಠಾಣಾ ಕ್ಷೇತ್ರ – ಶ್ರೀಕಾಂತ್
* ಸಿಂಧನೂರು ಕ್ಷೇತ್ರ – ನೆಕ್ಕಂಟಿ ಮಲ್ಲಿಕಾರ್ಜುನ
* ಹಿರಿಯೂರು ಕ್ಷೇತ್ರ – ಮಹೇಶ್

Home add -Advt

ಇದೇ ವೇಳೆ ಈ ಬಾರಿ ಚುನಾವಣೆಯಲ್ಲಿ ತಾವು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಜನಾರ್ಧನ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

*ಶಾಸಕರ ಜಂಜಾಟದಲ್ಲಿ ಸರಕಾರ ನಡೆಸಲು ಆಗುತ್ತಿಲ್ಲವೇ?; ಡಿ.ಕೆ.ಶಿವಕುಮಾರ್ ಪ್ರಶ್ನೆ*

https://pragati.taskdun.com/d-k-shivakumarpressmeetkarnataka-budgetmysore/

Related Articles

Back to top button