Kannada NewsKarnataka NewsLatest
ಗಗನಸಖಿ ಜತೆ ಅಸಭ್ಯ ವರ್ತನೆ; ವಿದೇಶಿ ಪ್ರಜೆ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆಯನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಅಕ್ರಂ ಅಹಮದ್ ಬಂಧಿತ. ಈತ ಮಾಲ್ಡೀವ್ಸ್ನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಿಜಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದ. ವಿಮಾನದಲ್ಲಿ ಗಗನಸಖಿ ಜತೆ ಅಸಭ್ಯ ವರ್ತನೆಗಿಳಿದ ಈತ ನಿನ್ನ ರೇಟ್ ಎಷ್ಟು ? ಎಷ್ಟು ಡಾಲರ್ ಗೆ ಬರುತ್ತೀಯಾ? ಎಂದು ಕೇಳಿದ್ದಾನೆ.
ಇಷ್ಟಕ್ಕೇ ತಣಿಯದ ಅಕ್ರಂ ಅಹಮದ್ ತನ್ನ ಸೀಟಿನ ಪಕ್ಕದಿಂದ ಹಾದು ಹೋಗುತ್ತಿದ್ದ ಗಗನ ಸಖಿ ಮೈಮೇಲೆ ಕೈ ಹಾಕಿ ದುಂಡಾವರ್ತಿ ತೋರಿದ್ದಾನೆ. ತನ್ನೊಂದಿಗೆ ಸಹಕರಿಸಿದರೆ ನೂರು ಡಾಲರ್ ಕೊಡುವುದಾಗಿಯೂ ಹೇಳಿದ್ದಾನೆ.
ಈ ಕುರಿತು ಗಗನಸಖಿ ನೀಡಿದ ದೂರಿನನ್ವಯ ಪೊಲೀಸರು ಅಕ್ರಂ ಅಹಮದ್ ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.




