Kannada NewsKarnataka NewsLatest

ಇಬ್ಬರನ್ನು ಬಿಟ್ಟು ಉಳಿದವರಿಗೆ ಎಂಜಿನಿಯರ್ಸ್ ಡೇ ಶುಭಾಶಯಗಳು!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂಜಿನಿಯರ್ ಗಳೆಲ್ಲ ಎಂಜಿನಿಯರ್ಸ್ ಡೇ ಸಂಭ್ರಮದಲ್ಲಿದ್ದಾರೆ. ಅಲ್ಲಲ್ಲಿ ಕಾರ್ಯಕ್ರಮಗಳ ಆಯೋಜನೆಗಳು ಒಂದೆಡೆಯಾದರೆ ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ಶುಭಾಶಯಗಳ ವಿನಿಮಯ ಜೋರಾಗಿ ನಡೆದಿದೆ.

ಏತನ್ಮಧ್ಯೆ ಜಾಲತಾಣದ ಬಳಕೆದಾರರೊಬ್ಬರು ಇಬ್ಬರು ಎಂಜಿನಿಯರ್ ಗಳನ್ನು ಬಿಟ್ಟು ಉಳಿದ ಎಂಜಿನಿಯರ್ ಗಳಿಗೆಲ್ಲ  ಶುಭಾಶಯ ಕೋರಿದ್ದಾರೆ !

Home add -Advt

ಇಷ್ಟಕ್ಕೂ ಇಬ್ಬರು ಎಂಜಿನಿಯರ್ ಗಳಿಗೆ ಶುಭಾಶಯ ಯಾಕಿಲ್ಲ ಎಂದರೆ ಅಭಿವೃದ್ಧಿ ಕಾಮಗಾರಿಗಳ ವಿಳಂಬ. ಜನರ ತಾಳ್ಮೆ ಪರೀಕ್ಷೆ ಮಾಡುವ ರೀತಿಯಲ್ಲಿ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ  ಎರಡು ಪ್ರಮುಖ ಕಾಮಗಾರಿಗಳ ಬಗ್ಗೆ ನೆಟ್ಟಿಗನ ಸಿಟ್ಟು ಈ ರೀತಿ ವ್ಯಕ್ತವಾಗಿದೆ.

“2 ವರ್ಷದಿಂದ ಬೆಳಗಾವಿಯ 3ನೇ ಮೇಲ್ಸೇತುವೆ ಹಾಗೂ 5 ವರ್ಷದಿಂದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಮಾಡುತ್ತಲೆ ಇರುವ ಹಾಗೂ ಮಾಡಿಸುತ್ತಿರುವ ಅಭಿಯಂತರರನ್ನು (Engineers) ಬಿಟ್ಟು, ಉಳಿದೆಲ್ಲ ಅಭಿಯಂತರ (Engineer) ಗಳಿಗೆ ಅಭಿಯಂತರರ ದಿನದ (Engineers day) ಶುಭಾಶಯಗಳು” ಎಂಬ ಸಂದೇಶ ಹರಿಬಿಟ್ಟಿದ್ದಾರೆ.

ಇದೀಗ ವೈರಲ್ ಆಗಿದ್ದು ಭಾರೀ ಚರ್ಚೆಗೆ ಒಳಗಾಗಿದೆ.

ನಗೆಪಾಟಲಿಗೀಡಾದ ನಿಧಿ ಸಂಗ್ರಹ !

Related Articles

Back to top button